Sunday, October 4, 2026

BDA Apartments

ಮತ್ತೆ ಜೆಡಿಎಸ್ ಪಕ್ಷ ವಿಸರ್ಜನೆ ಮಾತುಗಳನ್ನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರ...
Home Front Page ನಾವು ನುಡಿದಂತೆ ನಡೆಯುತ್ತೇವೆ: ಭ್ರಷ್ಟಾಚಾರ ಮುಕ್ತ, ಸ್ವಚ್ಛ ಆಡಳಿತ ನೀಡುವುದೇ ನಮ್ಮ ಗುರಿ- ರಾಹುಲ್ ಗಾಂಧಿ.

ನಾವು ನುಡಿದಂತೆ ನಡೆಯುತ್ತೇವೆ: ಭ್ರಷ್ಟಾಚಾರ ಮುಕ್ತ, ಸ್ವಚ್ಛ ಆಡಳಿತ ನೀಡುವುದೇ ನಮ್ಮ ಗುರಿ- ರಾಹುಲ್ ಗಾಂಧಿ.

ಬೆಂಗಳೂರು,ಮೇ,20,2023(www.justkannada.in): ರಾಜ್ಯದಲ್ಲಿ ಬದಲವಾವಣೆ ಗಾಳಿ ಬೀಸಿದ್ದು, ಇಂದು ದ್ವೇಷ ಅಳಿದಿದೆ. ಪ್ರೀತಿ ಗೆದ್ದಿದೆ. ನಾವು ನುಡಿದಂತೆ ನಡೆಯುತ್ತೇವೆ: ಭ್ರಷ್ಟಾಚಾರ ಮುಕ್ತ, ಸ್ವಚ್ಛ ಆಡಳಿತ ನೀಡುವುದೇ ನಮ್ಮ ಗುರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನುಡಿದರು.

ಇಂದು ಸಿಎಂ ಹಾಗೂ ಡಿಸಿಎಂ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದ ಜನರಿಗೆ ನನ್ನ ಮನಃಪೂರ್ವಕವಾಗಿ ಅಭಿನಂದನೆಗಳು. ಕಾಂಗ್ರೆಸ್​​ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ಅಭಿನಂದನೆಗಳು. ಭಾರತ್ ಜೋಡೋ ಯಾತ್ರೆಯಿಂದ ದ್ವೇಷ ಸೋತಿದೆ, ಪ್ರೀತಿ ಗೆದ್ದಿದೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ನೀಡಿತ್ತು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವನಿಧಿ ಗ್ಯಾರಂಟಿಗಳನ್ನು ನಾವು ನೀಡಿದ್ದೆವು, ಎಲ್ಲವನ್ನೂ ಈಡೇರಿಸುತ್ತೇವೆ ಎಂದರು.ನಾವು ನುಡಿದಂತೆ ನಡೆಯುತ್ತೇವೆ: ಭ್ರಷ್ಟಾಚಾರ ಮುಕ್ತ, ಸ್ವಚ್ಛ ಆಡಳಿತ ನೀಡುವುದ...

ಕಷ್ಟದ ಸಮಯದಲ್ಲೂ ಜನ ನಮ್ಮ ಬೆಂಬಲಕ್ಕೆ ನಿಂತರು. ಬಡವರು ನಮ್ಮ ಪರ ನಿಂತಿದ್ದರು. ಬಿಜೆಪಿ ಬಳಿ ಅಧಿಕಾರ , ಪೊಲೀಸರು ಎಲ್ಲವೂ ಇತ್ತು . ಬಿಜೆಪಿಯವ ದ್ವೇಷದ ರಾಜಕಾರಣ ಭ್ರಷ್ಟಾಚಾರವನ್ನ ಸೋಲಿಸಿದ್ದೀರಿ. ಬಿಜೆಪಿಯ ಎಲ್ಲಾ ತಾಕತ್ತನ್ನ ಸೋಲಿಸಿದ್ದೀರಿ  ಇಂದು ದ್ವೇಷ ಅಳಿದಿದೆ. ಪ್ರೀತಿ ಗೆದ್ದಿದೆ.  ಬಡವರು ದಲಿತರ ಜೊತೆ ಕಾಂಗ್ರೆಸ್ ನಿಂತಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.

Key words: congress-leader- Rahul Gandhi-bangalore-CM-DCM- Oath