ಕಾಂಗ್ರೆಸ್ ಗ್ಯಾರಂಟಿ ಯೋಜನೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ.

ಬೆಂಗಳೂರು,ಜನವರಿ,8,2024(www.justkannada.in): ಕಾಂಗ್ರೆಸ್  ಪಕ್ಷದ ಚುನಾವಣೆ ಗಿಮಿಕ್ ಗ್ಯಾರಂಟಿ. ಆದರೆ ದೇಶದ ಜನರು ಮೋದಿ ಗ್ಯಾರಂಟಿ ನಂಬಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿ.ವೈ ವಿಜಯೇಂದ್ರ, ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ. ಮೋದಿ ಅವರು  ಪಿಎಂ ಆಗೋದನ್ನ ಯಾರೂತಪ್ಪುಸಲು ಸಾಧ್ಯವಿಲ್ಲ ಎಂದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ  ಹದಗೆಟ್ಟಿದೆ. ರೈತರಿಗೆ ಸರ್ಕಾರ  ಬರಪರಿಹಾರ ನೀಡಿಲ್ಲ. ಅಂದು ಬರಬಂದಾಗ ಬಿಎಸ್‍ ಯಡಿಯೂರಪ್ಪ ಸಿಎಂ ಆಗಿದ್ದರು. ಬಿಎಸ್ ವೈ ಕೇಂದ್ರದ  ಪರಿಹಾರಕ್ಕೆ ಕಾದು ಕುಳಿತಿರಲಿಲ್ಲ . ಆದರೆ ಈಗಿನ ರಾಜ್ಯ ಸರ್ಕಾರ ಕೇಂದ್ರದ ಪರಿಹಾರಕ್ಕೆ ಕಾಯುತ್ತಾ ಕುಳಿತಿದೆ ಎಂದು ವಾಗ್ದಾಳಿ ನಡೆಸಿದರು.

Key words: Congress –Guarantee- Scheme- BJP State President -B.Y. Vijayendra