Sunday, August 23, 2026

BDA Apartments

Home Front Page ಒಂದುವರೆ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಸಂಸದ ಮುನಿಸ್ವಾಮಿ

ಒಂದುವರೆ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನ: ಸಂಸದ ಮುನಿಸ್ವಾಮಿ

ಕೋಲಾರ ,ಅಕ್ಟೊಬರ್, 18,2023(www.justkannada.in): ಒಂದುವರೆ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಸಂಸದ ಮುನಿಸ್ವಾಮಿ ಭವಿಷ್ಯ ನುಡಿದರು.

ಕೋಲಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ಮುನಿಸ್ವಾಮಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮನೆಯೊಂದು ನೂರಾರು ಬಾಗಿಲಾಗಿದೆ. ಒಂದು ಟೀಮ್ 20 ಜನರನ್ನು ಕರೆದುಕೊಂಡು ಒಂದು ಕಡೆ ಹೋದರೆ ಇನ್ನೊಂದು ಟೀಂ 10 ಜನರನ್ನು ಕರೆದುಕೊಂಡು ಬೇರೆ ಹೋಗುತ್ತಾರೆ . ಒಂದು ಟೀಂ ಮೂವರನ್ನು ಡಿಸಿಎಂ ಮಾಡಬೇಕು ಎಂದು ಹೇಳುತ್ತದೆ. ಮತ್ತೊಂದು ಟೀಮ್ ಬೇರೆಯವರನ್ನು ಸಿಎಂ ಮಾಡಬೇಕು ಎಂದು ಹೇಳುತ್ತದೆ. ಹೀಗಾಗಿ ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಪತನವಾಗಲಿದೆ ಎಂದರು.

ಇನ್ನೂ ಬೆಂಗಳೂರಿನಲ್ಲಿ ಗುತ್ತಿಗೆದಾರ ಅಂಬಿಕಾ ಪತಿ ಮನೆಯಲ್ಲಿ ಐಟಿ ದಾಳಿ ನಡೆಸಿ ಕೋಟ್ಯಾಂತರ ರೂಪಾಯಿ ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ವಸೂಲಿಗೆ ಇಳಿದಿದೆ. . ಗುತ್ತಿಗೆದಾರರಿಂದ ಕಾಂಗ್ರೆಸ್ 50 ರಿಂದ 60 ಪರ್ಸೆಂಟ್ ಹಣ ಸಂಗ್ರಹಿಸುತ್ತಿದೆ.  ಇದರ ಏಜೆಂಟ್ ರಣದೀಪ್ ಸಿಂಗ್ ಸುರ್ಜೆವಾಲ ಐದು ರಾಜ್ಯಗಳಿಗೆ ಹಣ ಕಳುಹಿಸುತ್ತಿದ್ದಾರೆ ಎಂದು ಮುನಿಸ್ವಾಮಿ ಆರೋಪಿಸಿದರು.

Key words: Congress -government -will –fall-MP- Muniswamy