Wednesday, August 12, 2026

BDA Apartments

Home Front Page ಕಾಂಗ್ರೆಸ್ ನವರಿಗೆ ಅಧಿಕಾರ ಸಿಕ್ಕಿರುವುದು ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ- ಮಾಜಿ ಸಚಿವ  ಸಿಸಿ ಪಾಟೀಲ್

ಕಾಂಗ್ರೆಸ್ ನವರಿಗೆ ಅಧಿಕಾರ ಸಿಕ್ಕಿರುವುದು ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ- ಮಾಜಿ ಸಚಿವ  ಸಿಸಿ ಪಾಟೀಲ್

ಗದಗ, ನವೆಂಬರ್​​​​​,4,2023(www.justkannada.in):  ಕಾಂಗ್ರೆಸ್​​ನವರಿಗೆ ಅಧಿಕಾರ ಸಿಕ್ಕಿರುವುದು ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ ಎಂದು ಮಾಜಿ ಸಚಿವ ಸಿ.ಸಿ.ಪಾಟೀಲ್ ​ ಕಿಡಿಕಾರಿದ್ದಾರೆ.

ಇಂದು ಮಾಧ್ಯದಗಳ ಜೊತೆ  ಮಾತನಾಡಿದ ಸಿ.ಸಿ ಪಾಟೀಲ್, ಸರ್ಕಾರದ ಲೋಪ‌ ದೋಷ ಆದಾಗ‌ ಎತ್ತಿ ಹಿಡಿಯಬೇಕಾಗಿದ್ದು ನಮ್ಮ ಧರ್ಮ. ಕರ್ತವ್ಯ. ಎಲ್ಲರೂ ಅಧಿಕಾರ ಮದದಲ್ಲಿ ಇದ್ದಾರೆ. 136 ಸೀಟು ಬಂದಿರುವುದರಿಂದ ಭಸ್ಮಾಸುರನಿಗೆ ಶಕ್ತಿ ಬಂದಂತಾಗಿದೆ. ಅಭಿವೃದ್ಧಿ‌ ಕಾರ್ಯಕ್ರಮ ಒಂದೂ ಇಲ್ಲ. ನಾವು ಜಾರಿಗೆ ತಂದಿದ್ದ ಅಭಿವೃದ್ದಿ‌ ಕಾರ್ಯಕ್ರಮ ನಿಲ್ಲಿಸಿದ್ದಾರೆ. ಕೆಲಸ ಮಾಡಿದ ಗುತ್ತಿಗೆದಾರರ ಬಿಲ್ ಕೊಡಿಸುತ್ತಿಲ್ಲ. ಇದಕ್ಕಿಂತ ಕೆಳಮಟ್ಟದ ರಾಜಕಾರಣ ಬೇಕಾ ಎಂದು ವಾಗ್ದಾಳಿ ನಡೆಸಿದರು.

 

ಬಿಜೆಪಿ ಬರ ಅಧ್ಯಯನ ಮೂಲಕ ಡ್ರಾಮಾ ಕಂಪನಿ ಶುರು ಮಾಡಿದೆ ಎಂಬ ಕಾಂಗ್ರೆಸ್ ಆರೋಪ  ಕುರಿತು ಪ್ರತಿಕ್ರಿಯಿಸಿದ ಸಿಸಿ ಪಾಟೀಲ್,  ನಾಟಕ ಅನ್ನೋದನ್ನ ನಾವು ಒಪ್ಪಿಕೊಳ್ಳುತ್ತೇವೆ. ಆದರೆ ನಾಟಕ ಮಾಡುವುದಕ್ಕೆ ಹಚ್ಚಿದವರಾರು. ಅವರು ಸರಿಯಾಗಿ ಅನುದಾನ ಕೊಟ್ಟಿದ್ದರೆ ನಾವು ಯಾಕೆ ನಾಟಕ ಶುರು ಮಾಡುತ್ತಿದ್ದೆವು. ನಾವು ವಿರೋಧ ಪಕ್ಷದಲ್ಲಿದ್ದೇವೆ ಎಂದು ಟಾಂಗ್ ನೀಡಿದರು.

Key words: Congress – got- power- like -Bhasmasura – power – Former minister- CC Patil