Sunday, August 23, 2026

BDA Apartments

Home Front Page  ಸಿಎಂ ಬಿಎಸ್ ವೈ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ಮಾಜಿ ಶಾಸಕ.

 ಸಿಎಂ ಬಿಎಸ್ ವೈ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ಮಾಜಿ ಶಾಸಕ.

ತುಮಕೂರು,ಜೂನ್,16,2021(www.justkannada.in):  ಯಡಿಯೂರಪ್ಪಗೆ ವಯಸ್ಸಾಗಿದೆ ಎಂದು ಬದಲಾವಣೆ ಸರಿಯಲ್ಲ. ಬಿ.ಎಸ್.ಯಡಿಯೂರಪ್ಪನವರೇ ಸಿಎಂ ಆಗಿದ್ದರೆ ಕಾಂಗ್ರೆಸ್ ಗೆ ಒಳ್ಳೆಯದು. ಕಾಂಗ್ರೆಸ್ ನವರು ಕೂಡ ಯಡಿಯೂರಪ್ಪ ಪರವಾಗಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಕೆ.ಎನ್ ರಾಜಣ್ಣ, ಯಡಿಯೂರಪ್ಪನವರು ನಾಮಕಾವಸ್ತೆ ಸಿಎಂ ಅಷ್ಟೇ. ಎಲ್ಲವನ್ನೂ ನಡೆಸುವುದು ವಿಜಯೇಂದ್ರನೇ. ವಿಜಯೇಂದ್ರನೇ ಸರ್ಕಾರ, ವಿಜಯೇಂದ್ರನೇ ಚೀಫ್ ಮಿನಿಸ್ಟರ್ ಎಂಬಂತಾಗಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರೆ ಕಾಂಗ್ರೆಸ್ ಪಕ್ಷಕ್ಕೂ ಹೆಚ್ಚು ಲಾಭ ಎಂದರು.

ಇನ್ನು ಯಡಿಯೂರಪ್ಪನವರಿಗೆ ವಯಸ್ಸಾಗಿದೆ ಎಂಬ ಕಾರಣಕ್ಕೆ ಅವರನ್ನು ಬದಲಾಯಿಸುವುದು ಸರಿಯಲ್ಲ. ಸಿಎಂ ಬದಲಾವಣೆ ಮಾಡುವುದು ಬಿಡುವುದು ಬಿಜೆಪಿ ಪಕ್ಷದ ವಿಚಾರ. ಸುಭದ್ರ ಸರ್ಕಾರ ಇದ್ದರೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತೆ. ಜನರಿಗೂ ಸಹಾಯವಾಗುತ್ತೆ  ಎಂದು ಕೆ.ಎನ್ ರಾಜಣ್ಣ ಹೇಳಿದರು.

Key words:  congress-former MLA-KN Rajanna-  bat –for- CM BS yeddyurappa