Tuesday, September 15, 2026

BDA Apartments

ಗ್ಯಾರಂಟಿ ಗೊಂದಲ ಡೈವರ್ಟ್​ ಮಾಡಲು ಕಾಂಗ್ರೆಸ್ ಯತ್ನ- ಶಾಸಕ ಶ್ರೀವತ್ಸ ಆರೋಪ BD...
Home Front Page ಗ್ಯಾರಂಟಿ ಗೊಂದಲ ಡೈವರ್ಟ್​ ಮಾಡಲು ಕಾಂಗ್ರೆಸ್ ಯತ್ನ- ಶಾಸಕ ಶ್ರೀವತ್ಸ ಆರೋಪ.

ಗ್ಯಾರಂಟಿ ಗೊಂದಲ ಡೈವರ್ಟ್​ ಮಾಡಲು ಕಾಂಗ್ರೆಸ್ ಯತ್ನ- ಶಾಸಕ ಶ್ರೀವತ್ಸ ಆರೋಪ.

ಮೈಸೂರು,ಜೂನ್,5,2023(www.justkannada.in): ಗ್ಯಾರಂಟಿ ಗೊಂದಲ ಡೈವರ್ಟ್​ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಇದೇ ಕಾರಣಕ್ಕೆ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿದ್ದಾರೆ  ಎಂದು ಮೈಸೂರು ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ಆರೋಪಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಶಾಸಕ ಶ್ರೀವತ್ಸ, ಕಾಂಗ್ರೆಸ್ ಒಂದು ಕೋಮಿನವರನ್ನು ಓಲೈಸಿಕೊಳ್ಳಲು ಮುಂದಾಗಿದೆ. ತಮಗೆ ಮತ ನೀಡಿದ್ದಾರೆ ಎಂಬ ಕಾರಣಕ್ಕೆ ಅವರ ಪರ ನಿರ್ಣಯ ಮಂಡಿಸಿದೆ. ಈ ಮೂಲಕ ಕಾಂಗ್ರೆಸ್​​ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುತ್ತಿದೆ. ಕಾಂಗ್ರೆಸ್​ ನಿರ್ಧಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಮಾಡ್ತೇವೆ ಎಂದು ವಾಗ್ದಾಳಿ ನಡೆಸಿದರು.ಗ್ಯಾರಂಟಿ ಗೊಂದಲ ಡೈವರ್ಟ್​ ಮಾಡಲು ಕಾಂಗ್ರೆಸ್ ಯತ್ನ shrivatsa

Key words: Congress – divert- guarantee -confusion- MLA -Srivatsa –mysore