ಡಿಸಿಎಂ ಡಿಕೆ ಶಿವಕುಮಾರ್ ಕರೆದಿದ್ದ ಸರ್ವಪಕ್ಷ ಸಭೆ ಬಹಿಷ್ಕರಿಸಿ ಹೊರ ನಡೆದ ಬಿಜೆಪಿ ಶಾಸಕರು.

ಬೆಂಗಳೂರು,ಜೂನ್,5,2023(www.justkannada.in):  ಸರಿಯಾದ ಸಮಯಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಬಾರದ ಹಿನ್ನೆಲೆ ಬಿಜೆಪಿ ಶಾಸಕರು ಸರ್ವಪಕ್ಷ ಸಭೆಯನ್ನ ಬಹಿಷ್ಕರಿಸಿ ಹೊರನಡೆದ ಘಟನೆ ವಿಧಾನಸೌಧದಲ್ಲಿ ನಡೆದಿದೆ.

ಡಿಸಿಎಂ ಡಿಕೆ ಶಿವಕುಮಾರ್  ಬಾರದಿದ್ದರಿಂದ ಸಮಯಕ್ಕೆ ಸರಿಯಾಗಿ ಸಭೆ ಆರಂಭಿಸಿಲ್ಲವೆಂದು ಶಾಸಕರ ಆಕ್ರೋಶ ಹೊರ ಹಾಕಿದ್ದು ಸಭೆ ಬಹಿಷ್ಕರಿಸಿದರು. ವಿಧಾನಸೌಧದಲ್ಲಿ ಇಂದು ಡಿಸಿಎಂ ಡಿ.ಕೆ ಶಿವಕುಮಾರ್ 11 ಗಂಟೆಗೆ ಸರ್ವಪಕ್ಷ ಸಭೆ ಆಯೋಜಿಸಿದ್ದರು. ಆದರೆ ಡಿ.ಕೆ ಶಿವಕುಮಾರ್ 12 ಗಂಟೆಯಾದರೂ ಸಭೆ ಬಾರದ ಹಿನ್ನೆಲೆ ಬಿಜೆಪಿ ಶಾಸಕರಾದ ಅಶ್ವಥ್ ನಾರಾಯಣ್, ಮುನಿರತ್ನ, ಭೈರತಿ ಬಸವರಾಜು, ಎಸ್.ಆರ್ ವಿಶ್ವನಾಥ್ , ಎಸ್.ಟಿ ಸೋಮಶೇಖರ್ ಸಭೆಯನ್ನ ಬಹಿಷ್ಕರಿಸಿ ಹೊರ ನಡೆದರು.

ಈ ಕುರಿತು ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್,  ಎಲ್ಲಾ ಪಕ್ಷದ ನಾಯಕರನ್ನ ಕಾಯಿಸುವುದು ಸೂಕ್ತವಲ್ಲ. ಡಿಸಿಎಂಗಾಗಿ ಕಾದು ಕಾದು ಬೇಸರವಾಗಿ ಸಭೆಯಿಂದ ಹೊರ ಬಂದಿದ್ದೇವೆ. ಬೆಳಗ್ಗೆ 11 ಗಂಟೆಗೆ ಸಭೆ ಕರೆದು 1 ತಾಸು ತಡವಾದರೂ ಆಗಮಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Key words: BJP MLAs- boycotted -all-party meeting -called – DCM- DK Shivakumar.