ಕಾಂಗ್ರೆಸ್ ಗೆ  ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ರೆ ಸಿಎಂ ಮಾಡಲಿ- ಸಿ.ಟಿ ರವಿ ಟಾಂಗ್

ನವದೆಹಲಿ,ಜೂನ್,28,2021(www.justkannada.in):  ಸಿಎಂ ಮಾಡದೆ ದಲಿತರಿಗೆ ಮೋಸ ಮಾಡಿದ್ರಿ, ಅಲ್ಪಸಂಖ್ಯಾತರಿಗೆ ಮೋಸ ಮಾಡಬೇಡಿ. ಕಾಂಗ್ರೆಸ್ ಗೆ  ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇದ್ದರೆ ಸಿಎಂ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದರು.jk

ಕಾಂಗ್ರೆಸ್ ನಲ್ಲಿ ಭವಿಷ್ಯದ ಸಿಎಂ ಅಭ್ಯರ್ಥಿ ಜಟಾಪಟಿ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ,  ಕಾಂಗ್ರೆಸ್ ಎಂಎಲ್ ಸಿ  ಸಿ.ಎಂ.ಇಬ್ರಾಹಿಂ ಹೇಳಿಕೆ ಗಮನಿಸಿದ್ದೇನೆ. ಇಬ್ರಾಹಿಂ ಸಿಎಂ ಆಗಬೇಕು ಎಂಬ ಹೇಳಿಕೆಯಲ್ಲಿ ನ್ಯಾಯ ಇದೆ ಎಂದರು.

ಬಿಜೆಪಿಗೆ ಬಹುಮತವಿದೆ, ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಕಾಂಗ್ರೆಸ್‌ ನವರು ಬಹುಮತ ಇಲ್ಲದಿದ್ದರೂ ಅಲ್ಲಿನ ಹಲವರು ಸಿಎಂ ಆಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಸಿಎಂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದ ರೀತಿಯಲ್ಲಿ ಬೆಳೆಯುತ್ತಿದೆ ಎಂದು ಲೇವಡಿ ಮಾಡಿದರು.

ದಲಿತರಿಗೆ ಮೋಸ ಮಾಡಿದ ರೀತಿ ಅಲ್ಪಸಂಖ್ಯಾತರಿಗೆ ಮೋಸ ಮಾಡಬೇಡಿ. ಅಲ್ಪಸಂಖ್ಯಾತರ ಮೊಣಕೈಗೆ ತುಪ್ಪ ಸವರಬೇಡಿ. ಸಿಎಂ ಇಬ್ರಾಹಿಂ, ಜಮೀರ್ ಅಹ್ಮದ್ ಖಾನ್, ತನ್ವೀರ್ ಸೇಠ್, ಯಾರನ್ನಾದರೂ ಸಿಎಂ ಮಾಡಿ ಎಂದು ಕಾಂಗ್ರೆಸ್ ವಿರುದ್ಧ ಸಿ.ಟಿ ರವಿ ವ್ಯಂಗ್ಯವಾಡಿದರು.

Key words: Congress –CM-minorities- BJP-leader-CT Ravi- Tong