ಸಹಕಾರಿ ಬ್ಯಾಂಕ್ ನಿಂದ ಗ್ರಾಹಕರಿಗೆ ಕೋಟ್ಯಾಂತರ ರೂ. ವಂಚನೆ…?

ಬೆಂಗಳೂರು,ಜೂನ್,28,2021(www.justkannada.in):   ಸಹಕಾರಿ ಬ್ಯಾಂಕ್  ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಆರೋಪ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೇಳಿ ಬಂದಿದೆ.   jk

ನಗರದ ಹನುಮಂತನಗರದಲ್ಲಿರುವ ಶ್ರೀ ವಸಿಷ್ಠ  ಕ್ರೆಡಿಟ್  ಸೌಹಾರ್ಧ ಸಹಕಾರ ಬ್ಯಾಂಕ್ ವಿರುದ್ಧವೇ ಈ ಆರೋಪ ಕೇಳಿ ಬಂದಿರುವುದು. ಗ್ರಾಹಕರಿಗೆ ಬಡ್ಡಿ ಹಣ ನೀಡದೇ ಕಳ್ಳಾಟ ನಡೆಸಿದೆ ಎಂಬ  ಆರೋಪ ಮಾಡಲಾಗಿದೆ.

ಈ ಬಗ್ಗೆ ಗ್ರಾಹಕರು ಪ್ರಶ್ನೆ ಮಾಡಿದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಲಗಾರರು ಹಣ ಹಿಂತಿರುಗಿಸಿಲ್ಲ ಎಂದು ಸಹಕಾರಿ ಬ್ಯಾಂಕ್  ಹೇಳುತ್ತಿದ್ದು, ಇದೀಗ ಗ್ರಾಹಕರು ಬ್ಯಾಂಕ್ ವಿರುದ್ಧ ಹನುಮಂತನಗರ ಠಾಣೆಗೆ  ದೂರು ನೀಡಿದ್ದಾರೆ.

ಎಫ್‌ಐಆರ್ ದಾಖಲಾಗುತ್ತಿದ್ದಂತೆಯೇ ಬ್ಯಾಂಕ್ ಮುಖ್ಯಸ್ಥರಾದ ವೆಂಕಟನಾರಾಯಣ ಮತ್ತು ಕೃಷ್ಣಪ್ರಸಾದ್ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.

Key words: Co-operative -Bank –Fraud- Consumers-bangalore