Sunday, September 27, 2026

BDA Apartments

ಲಿಂಗಾಯತ ಡ್ಯಾಂ ಒಡೆಯುವ ಕಾಂಗ್ರೆಸ್ ಕನಸು ನನಸಾಗುವುದಿಲ್ಲ- ಡಿಕೆಶಿಗೆ ಸಚಿವ ...
Home Front Page ಲಿಂಗಾಯತ ಡ್ಯಾಂ ಒಡೆಯುವ ಕಾಂಗ್ರೆಸ್ ಕನಸು ನನಸಾಗುವುದಿಲ್ಲ- ಡಿಕೆಶಿಗೆ ಸಚಿವ ಸಿಸಿ ಪಾಟೀಲ್ ಟಾಂಗ್.

ಲಿಂಗಾಯತ ಡ್ಯಾಂ ಒಡೆಯುವ ಕಾಂಗ್ರೆಸ್ ಕನಸು ನನಸಾಗುವುದಿಲ್ಲ- ಡಿಕೆಶಿಗೆ ಸಚಿವ ಸಿಸಿ ಪಾಟೀಲ್ ಟಾಂಗ್.

ಬೆಂಗಳೂರು,ಏಪ್ರಿಲ್,21,2023(www.justkannada.in): ಡ್ಯಾಂ ಒಡೆದಾಗ ಹರಿವ ನೀರು ನಿಲ್ಲಿಸಲಾಗದು ಡ್ಯಾಂ ಒಡೆದಾಗ ಹೊಸದಾಗಿ ಡ್ಯಾಂ ಕಟ್ಟಬೇಕು. ಹರಿಯುವ ನೀರು ಸಮುದ್ರ ಸೇರಲೇಬೇಕು ಎಂದು ಕೆಲ ಲಿಂಗಾಯತ ನಾಯಕರು ಕಾಂಗ್ರೆಸ್ ಸೇರ್ಪಡೆ ಕುರಿತು  ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಸಚಿವ ಸಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸಿ.ಸಿ ಪಾಟೀಲ್, ಲಿಂಗಾಯತ ಡ್ಯಾಂ ಒಡೆಯುವ ಕನಸು ನನಸಾಗುವುದಿಲ್ಲ.  ಸಿದ್ಧರಾಮಯ್ಯ  ಅವಧಿಯಲ್ಲೂ ಧರ್ಮ ಒಡೆಯುವ ಕುತಂತ್ರ ಮಾಡಿದ್ದರು. ಧರ್ಮ ಒಡೆದು ಆಳುವ ಕುತಂತ್ರಕ್ಕೆ ಕೈಹಾಕಿದರು.  ಕಾಂಗ್ರೆಸ್ ಅಣೆಕಟ್ಟೆಯೇ  ಒಡೆದು ಒಣಗಿತ್ತು. ಲಿಂಗಾಯಿತರೇ ಸಿಎಂ ಎನ್ನಲು  ನಿಮಗೆ ತಾಕತ್ತು ಇದೆಯೇ.? ಎಂದು ಸವಾಲು ಹಾಕಿದರು.ಲಿಂಗಾಯತ ಡ್ಯಾಂ ಒಡೆಯುವ ಕಾಂಗ್ರೆಸ್ ಕನಸು ನನಸಾಗುವುದಿಲ್ಲ cc patil

ಪಾಟೀಲರನ್ನ ಹೀನಾಯವಾಗಿ ನಡೆಸಿಕೊಂಡರು. ಲಿಂಗಾಯತರ ಡ್ಯಾಂ ಬಿಜೆಪಿ ಪರವಿದೆ. ಲಿಂಗಾಯತ ಡ್ಯಾಂ ಒಡೆಯುವ ಕಾಂಗ್ರೆಸ್ ವ್ಯರ್ಥ ಪ್ರಯತ್ನ ಯಶಸ್ವಿಯಾಗಲ್ಲ ಎಂದು ಸಚಿವ ಸಿಸಿ ಪಾಟೀಲ್ ತಿಳಿಸಿದರು.

Key words: Congress – break-Lingayat Dam – Minister -CC Patil