ಮಳೆ ಹಿನ್ನೆಲೆ : ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ರದ್ದು.

ಬೆಂಗಳೂರು,ಏಪ್ರಿಲ್,21,2023(www.justkannada.in):  ಮಳೆ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ಇಂದು ನಡೆಯಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ರದ್ದು ಮಾಡಲಾಗಿದೆ.

ಬಿಜೆಪಿ ಅಭ್ಯರ್ಥಿ ಪಿಳ್ಳಮುನಿಶಾಮಪ್ಪ  ಪರ ಅಮಿತ್ ಶಾ ರೋಡ್‌ ಶೋ ನಡೆಸಬೇಕಿತ್ತು. ಆದರೆ ದೇವನಹಳ್ಳಿ ಸುತ್ತಮುತ್ತ ಮಳೆಯಾಗುತ್ತಿರುವ  ಹಿನ್ನೆಲೆ ಅಮಿತ್ ಶಾ ರೋಡ್‌ ಶೋ ಕ್ಯಾನ್ಸಲ್​ ಮಾಡಲಾಗಿದೆ.

ಸದ್ಯ ಕೆಐಎಬಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಜಯಪುರ ಬದಲಿಗೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ಗೆ ತೆರಳಿದ್ದಾರೆ ಎನ್ನಲಾಗಿದೆ.

Key words: Rain – Union Home Minister- Amit Shah -road show- cancelled.