ಚುನಾವಣೆ ಬಂದಾಗ ಕಾಂಗ್ರೆಸ್ ಪಾರ್ಟ್ ಟೈಂ ಹಿಂದೂ ಆಗುತ್ತೆ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ.

ಹುಬ್ಬಳ್ಳಿ,ಸೆಪ್ಟಂಬರ್,7,2023(www.justkannada.in):  ಉದಯನಿಧಿ ಸ್ಟಾಲಿನ್ ಅಚಾನಕ್​ ಆಗಿ ಕೊಟ್ಟ ಹೇಳಿಕೆ ಅಲ್ಲ. ಸ್ಟಾಲಿನ್ ಹೇಳಿಕೆ ಖಂಡಿಸುವ ಶಕ್ತಿ ನಿಮಗಿಲ್ಲ. ಇದು ಅಧಿಕಾರದ ತುಷ್ಟೀಕರಣದ ಪರಾಕಾಷ್ಠೆ. ಚುನಾವಣೆ ಬಂದಾಗ ಕಾಂಗ್ರೆಸ್ ಪಾರ್ಟ್ ಟೈಂ ಹಿಂದೂ ಆಗುತ್ತೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಪ್ರಹ್ಲಾದ್ ಜೋಶಿ,  ಉದಯನಿಧಿ ಸ್ಟಾಲಿನ್ ಈ ರೀತಿ ಹೇಳೀಕೆ ಕೊಟ್ಟರೂ ಕಾಂಗ್ರೆಸ್ ವಿರೋಧ ಮಾಡಿಲ್ಲ ಉದಯನಿಧಿಯನ್ನ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿದ್ದಾರೆ. ಇದನ್ನು ಖಂಡನೇ ಮಾಡದೆ ಹೋದರೆ ನೀವೆ ಹೇಳಿಕೆ ಕೊಡಿಸಿದ್ದೀರಿ ಎಂದರ್ಥ. ಅಷ್ಟೇ ಅಲ್ಲದೆ ತುಷ್ಟೀಕರಣ ರಾಜಕಾರಣ‌ ಮಾಡುತ್ತಿದ್ದಾರೆ ವಾಗ್ದಾಳಿ ನಡೆಸಿದರು.

ಮೊದಲು ತಮಿಳುನಾಡಿಗೆ ನೀರು ಬಿಟ್ಟು ಇದೀಗ ಮೇಲ್ಮನವಿ ಸಲ್ಲಿಸಿದ್ದಾರೆ. ಇದು ಕೂಡಾ ಘಟಬಂಧನ ಉಳಿಸುವ ತಂತ್ರವಾಗಿದೆ. ಆ ಮೂಲಕ ರಾಜ್ಯದ ಹಿತಾಸಕ್ತಿ ಬಲಿ ಕೊಟ್ಡಿದ್ದಾರೆ. ಮೋದಿ‌ ಸೋಲಿಸಲು ಷಡ್ಯಂತ್ರ ಮಾಡಿದ್ದಾರೆ. ಏನೇ ಷಡ್ಯಂತ್ರ ಮಾಡಿ ಮೋದಿ ಮತ್ತೆ ಗೆಲ್ಲುತ್ತಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: Congress- become – part-time- Hindu – elections -Union Minister- Prahlad Joshi