ನಿಮಗೆ ತಾಕತ್ತಿದ್ದರೇ ಭಜರಂಗದಳ ಬ್ಯಾನ್ ಮಾಡಿ – ಕಾಂಗ್ರೆಸ್ ವಿರುದ್ದ ಪ್ರಮೋದ್ ಮುತಾಲಿಕ್ ಕಿಡಿ.

ಉಡುಪಿ,ಮೇ,2,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ಇಂದು ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧಿಸುವ ಅಂಶವನ್ನ ಸೇರಿಸಿರುವುದಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಮೋದ್ ಮುತಾಲಿಕ್, ಪಿಎಫ್ ಐ ಸಂಘಟನೆಯನ್ನ ಮುಸ್ಲಿಂ ಸಂಘಟನೆ ಎಂದು ಬ್ಯಾನ್ ಮಾಡಿಲ್ಲ. ದೇಶದ್ರೋಹಿ ಸಂಘಟನೆ ಎಂದು ಬ್ಯಾನ್ ಆಗಿದೆ.  ಕಾಂಗ್ರಸ್ ನವರು ನಿಮಗೆ ಬುದ್ದಿ ಇದೆಯಾ ದೇಶದ್ರೋಹಿ ಸಂಘಟನೆ ಜೊತೆ ಭಜರಂಗದಳ ಹೋಲಿಸ್ತೀರಿ ಎಂದು ಹರಿಹಾಯ್ದರು.

ನೀವು ಹಿಂದೂಗಳಿಗೆ ದ್ರೋಹ ಮಾಡಿದ್ದೀರಿ ನಿಮಗೆ ತಾಕತ್ತಿದ್ದರೇ ಭಜರಂಗದಳ ಬ್ಯಾನ್ ಮಾಡಿ  ನೋಡೋಣಾ  ನೀವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.

Key words: congress-Bajaranga dal-ban-Pramod muthalik