Friday, September 11, 2026

BDA Apartments

Home Front Page ಸುಳ್ಳು ಹೇಳುವುದರಲ್ಲಿ ಸಂಸದ ಸಿಂಹ ನಿಸ್ಸೀಮ: ಎಚ್.ಎ.ವೆಂಕಟೇಶ್

ಸುಳ್ಳು ಹೇಳುವುದರಲ್ಲಿ ಸಂಸದ ಸಿಂಹ ನಿಸ್ಸೀಮ: ಎಚ್.ಎ.ವೆಂಕಟೇಶ್

congress ̲ mp ̲ prathap simha ̲ bjp ̲ mysore

 

ಮೈಸೂರು, ಫೆ.೦೮, ೨೦೨೪ : ಕ್ಷೇತ್ರದ ಬಗ್ಗೆ ಯಾವುದೇ ವಿಶೇಷ ಯೋಜನೆಗಳನ್ನು ತಾರದೆ ಪ್ರಧಾನಿ ನರೇಂದ್ರಮೋದಿ ಅವರಂತೆ ಸುಳ್ಳುಹೇಳಿಕೊಂಡು ಕಾಲಾಹರಣ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡಿರುವುದು ಹಾಸ್ಯಾಸ್ಪದ.

ಪ್ರತಾಪ್ ಸಿಂಹ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಟೀಕಿಸಿದ್ದಾರೆ.

ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನು ನೀಡದೆ ಇರುವ ಬಗ್ಗೆ ಪ್ರಧಾನಿ ಮತ್ತು ವಿತ್ತ ಸಚಿವರನ್ನು ಪ್ರಶ್ನೆ ಮಾಡುವುದಕ್ಕೆ ಧೈರ್ಯ ತೋರುವ ಬದಲಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಸುಳ್ಳು ವಿಚಾರಗಳನ್ನು ಪ್ರಸ್ತಾಪಿಸಿ ಹೈಕಮಾಂಡ್ ನಾಯಕರ ಮನವೊಲಿಸುವ ಕೆಲಸ ಮಾಡಿದ್ದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪಂಚ ಗ್ಯಾರಂಟಿ ಯೋಜನೆಗಳಿಂದ ನಾಡಿನ ಐದು ಕೋಟಿ ಜನರು ನೆಮ್ಮದಿಯಿಂದ ಇದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಅನುದಾನವನ್ನು ಮುಖ್ಯಮಂತ್ರಿ ಮೀಸಲಿಟ್ಟಿದ್ದಾರೆ. ರಾಜ್ಯದ ಪಾಲನ್ನು ನೀಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಅಂಕಿಅಂಶದ ವಿವರಣೆ ನೀಡಿದ್ದಾರೆ. ಈ ಬಗ್ಗೆ ವಾಸ್ತವ ಮಾತನಾಡದೆ ಸುಳ್ಳು ಹೇಳುತ್ತಿದ್ದಾರೆ. ಸದನದಲ್ಲಿ ಸುಳ್ಳು ಹೇಳಿ ಜನರಿಗೆ ತಪ್ಪು ಸಂದೇಶ ಬರುವಂತೆ ಮಾತನಾಡಿರುವುದು ಖಂಡನೀಯ ಎಂದರು.

key words : congress ̲ mp ̲ prathap simha ̲ bjp ̲ mysore