ಬಜೆಟ್ ನಲ್ಲಿ ಎಸ್ ಸಿ ಮತ್ತು ಎಸ್ ಟಿಗೆ ಕನಿಷ್ಠ ಅನುದಾನ ನಿಗದಿಪಡಿಸಿರುವ ಸರ್ಕಾರದ ಧೋರಣೆ ಖಂಡಿಸಿ ಸಭೆ…..

ಮೈಸೂರು,ಮಾರ್ಚ್,13,2021(www.justkannada.in):  ಈ ಬಾರಿ ಬಜೆಟ್ ನಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಕನಿಷ್ಠ ಅನುದಾನ ನಿಗದಿಪಡಿಸಿರುವ ಕ್ರಮವನ್ನ ಖಂಡಿಸಿ ಮಾಜಿ ಮೇಯರ್ ಪುರೋಷತ್ತಮ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.jk

ವಿಶ್ವಮೈತ್ರಿ ಬುದ್ಧ ವಿಹಾರದಿಂದ  ಅಶೋಕ ವೃತ್ತದ ಬುದ್ಧ ವಿಹಾರ ಸಭಾಂಗಣದಲ್ಲಿ  ಸಭೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು. ಬಜೆಟ್ ನಲ್ಲಿ ಬಲಿಷ್ಠ ಸಮುದಾಯಗಳಿಗೆ ಹೆಚ್ಚಿನ ಅನುದಾನ ನೀಡಿರುವುದಕ್ಕೆ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಯಿತು.

ಬಜೆಟ್ ನಲ್ಲಿ ವೀರಶೈವ ಲಿಂಗಾಯಿತ, ಒಕ್ಕಲಿಗ ಸಮಾಜದ ಅಭಿವೃದ್ಧಿಗೆ ತಲಾ 500 ಕೋಟಿ, ಬ್ರಾಹ್ಮಣ ಸಮುದಾಯ ಅಭಿವೃದ್ಧಿಗೆ 50 ಕೋಟಿ ಹಣ ನೀಡಿದ್ದಾರೆ. ಉಳಿದ 30ಕ್ಕೂ ಹೆಚ್ಚು ಜಾತಿಗಳಿಗೆ 500 ಕೋಟಿ ನೀಡಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ಅನ್ಯಾಯವಾಗಿದೆ. ಈಗಿನ ಬಿಜೆಪಿ ಸರ್ಕಾರ ದಲಿತ, ಹಿಂದುಳಿದ, ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆಯೆಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕೃಪೆ internet

ಸಭೆಯಲ್ಲಿ ದಲಿತ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಹರಿಹರ ಆನಂದಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರು ಭಾಗಿಯಾಗಿದ್ದರು.

Key words: Condemnation – government- attitude – minimum -allocation – SC -ST – budget.