ಶಿಸ್ತು ಸಾಧನೆಗೆ ಪೂರಕ- ಡಾ. ಹೇಮಚಂದ್ರ

ಮೈಸೂರು 27,2023(www.justkannada.in):  ಜೀವನದಲ್ಲಿ ಶಿಸ್ತು ಇದ್ದರೆ ಏನಾದರೂ ಸಾಧಿಸಬಹುದು ಎಂದು ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಭೂಗೋಳ ಶಾಸ್ತ್ರದ ಸಹ ಪ್ರಾಧ್ಯಾಪಕ ಡಾ.ಹೇಮಚಂದ್ರ ಹೇಳಿದರು.

ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜಿನಲ್ಲಿ ಜೀವನ ಕೌಶಲ್ಯ ತರಬೇತಿ ಸಮಿತಿ, ಯೂತ್ ರೆಡ್ ಕ್ರಾಸ್ ಮತ್ತು ಐ. ಕ್ಯೂ. ಎ. ಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಆಗಮಿಸಿ,  ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಜೀವನ ಕೌಶಲ್ಯ ಎಂಬ ವಿಷಯದ ಬಗ್ಗೆ  ವಿಶೇಷ ಉಪನ್ಯಾಸವನ್ನು  ನೀಡಿದರು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಕಷ್ಷವೇನಲ್ಲ. ಆದರೆ ಆದಕ್ಕೆ ಶಿಸ್ತುಬದ್ಧ ಅಧ್ಯಯನ ಮುಖ್ಯ. ಏಕೆಂದರೆ, ಹಲವಾರು ವಿಷಯಗಳನ್ನು ಗ್ರಹಿಸಿಕೊಂಡು, ನಂತರ ಅದನ್ನು  ಕ್ರೋಢೀಕರಿಸಿ ಅಗತ್ಯವಾದ ಅಂಶಗಳನ್ನು ಕಠಿಣವಾಗಿ ಕಲಿಯಬೇಕು ಎಂದರು.

ಹಲವಾರು ಸಾಧಕರನ್ನು ಉದಾಹರಿಸಿದ ಅವರು, ಪ್ರತಿನಿತ್ಯ ಪತ್ರಿಕೆಗಳನ್ನು ಓದಿದರೆ ಸಾಮನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳ ಜ್ಞಾನ ಹೆಚ್ಚಲಿದೆ ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಡಿ ರವಿ ಅವರು,  ಪ್ರಸ್ತುತ ದಿನಮಾನದಲ್ಲಿ ಸ್ಪರ್ಧೆ ಎಂಬುದು ಕೇವಲ ಪ್ರಾದೇಶಿಕವಾಗಿ ಸೀಮಿತವಾಗಿಲ್ಲ. ಅದು ಜಾಗತಿಕ ಮಟ್ಟದಲ್ಲಿದೆ. ಹಾಗಾಗಿ ಆ ಮಟ್ಟಕ್ಕೆ ಜ್ಞಾನ ವೃದ್ಧಿ ಮಾಡಿಕೊಳ್ಳುವ ಅನಿವಾರ್ಯ ಇಂದಿನ ಯುವಜನಾಂಗಕ್ಕೆ ಅನಿವಾರ್ಯವಾಗಿದೆ. ಹಾಗಾಗಿ ಇಷ್ಟಪಟ್ಟು ಓದುವ ಮೂಲಕ ವಿಷಯ ಕಲಿಕೆಯನ್ನು ಸುಲಭ ಮಾಡಿಕೊಳ್ಳಿ ಎಂದು ಕರೆ ನೀಡಿದರು.

ಯುವ ರೆಡ್ ಕ್ರಾಸ್ ಸಂಚಾಲಕ  ಡಾ. ಸಂತೋಷ್ ಕುಮಾರ್ ಬಿ ಎನ್, ಐ.ಕ್ಯೂ.ಎ.ಸಿ ಸಂಚಾಲಕ ನಂದಕುಮಾರ್,  ,ಜೀವನ ಕೌಶಲ್ಯ ತರಬೇತಿಯ ಸಂಚಾಲಕರಾದ ಡಾ.ಆರ್. ಟಿ  ರಾಧಿಕಾ, ಅಧ್ಯಾಪಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.  ನಿರೂಪಣೆಯನ್ನು ವಿದ್ಯಾರ್ಥಿನಿ ಹಂಸ ಮಾಡಿದರು.

Key words: Complementary – achievement -discipline – Dr. HemaChandra-mysore