ಬೆಂಗಳೂರು,ಫೆಬ್ರವರಿ,6,2026 (www.justkannada.in): ಬಿಗ್ ಬಾಸ್ ಸೀಜನ್ 12ರ ವಿನ್ನರ್ ಗಿಲ್ಲಿನಟ ವಿರುದ್ಧ ಫಿಲ್ಮ್ ಚೇಂಬರ್ ಗೆ ದೂರು ನೀಡಲಾಗಿದೆ.
ಸರ್ಕಾರಿ ಶಾಲೆ H8′ ಸಿನಿಮಾದ ನಿರ್ಮಾಪಕರು ಗಿಲ್ಲಿನಟ ವಿರುದ್ಧ ದೂರು ನೀಡಿದ್ದಾರೆ. ಗಿಲ್ಲಿ ನಮ್ಮ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಗಿಲ್ಲಿ ಕೇಳಿದಷ್ಟು ಸಂಭಾವನೆಯನ್ನು ಕೊಟ್ಟು ಅವಕಾಶ ಕೊಟ್ಟಿದ್ದವು. ಬಿಗ್ ಬಾಸ್ ರಿಯಾಲಿಟಿ ಶೋಗೆ ಗಿಲ್ಲಿ ಹೋಗುವ ಮೊದಲು ಸಂಭಾವನೆ ನೀಡಿದ್ದೆವು. ಆದರೆ ಈಗ ಗಿಲ್ಲಿನಟ ಸಿನಿಮಾ ಪ್ರಮೋಷನ್ ಗೆ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅಲ್ಲದೆ ಗಿಲ್ಲಿನಟಗೆ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ಸ್ವೀಕರಿಸುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಒಂದು ಪೋಸ್ಟ್ ಕೂಡ ಮಾಡುತ್ತಿಲ್ಲ ಎಂದು ನಿರ್ಮಾಪಕ ದೂರಿದ್ದಾರೆ.
Key words: Complaint, against, Bigg Boss, winner, Gillinata , Film Chamber







