Friday, August 7, 2026

BDA Apartments

Home Front Page ಮೈಸೂರು ಡಿಸಿಗೆ ಸಂಸದ ಪ್ರತಾಪ್ ಸಿಂಹ ವಿರುದ್ದ ದೂರು.

ಮೈಸೂರು ಡಿಸಿಗೆ ಸಂಸದ ಪ್ರತಾಪ್ ಸಿಂಹ ವಿರುದ್ದ ದೂರು.

ಮೈಸೂರು,ಸೆಪ್ಟಂಬರ್,14,2021(www.justkannada.in): ಮುಸ್ಲಿಂರ ದರ್ಗಾ ಹೊಡೆಯಲು ನಿಮಗೆ ತೊಡೆ ನಡುಗುತ್ತಾ ಎಂಬ   ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ವಿರುದ್ಧ  ಮೈಸೂರು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.

ಜಿಲ್ಲಾ ಹಾಗೂ ನಗರ ಕಾಂಗ್ರೆಸ್ ಸಮಿತಿಯು ಸ್ವವಿವರವಾಗಿ ದೂರು ನೀಡಿದ್ದು ಸಂಸದ ಪ್ರತಾಪ್ ಸಿಂಹ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಕೆಡಿಪಿ ಸಭೆಯಲ್ಲೇ ಸಂಸದರು ಡಿಸಿಗೆ ಈ ರೀತಿ ಬೆದರಿಕೆ ಹಾಕಿರುವುದು ಅಕ್ಷಮ್ಯ ಅಪರಾಧ ಎಂದಿರುವ ಕಾಂಗ್ರೆಸ್ ಸಮಿತಿ ದೂರಿನಲ್ಲಿ ಪ್ರತಾಪ್ ಸಿಂಹ ವಿರುದ್ದ ಗಂಭೀರ ಅರೋಪ ಮಾಡಿದೆ.

ಕೋಮು ಗಲಭೆ ಸೃಷ್ಟಿಸಲು ರಾತ್ರೋರಾತ್ರಿ ಹಿಂದೂ ದೇವಾಲಯ ಹೊಡೆದು ಹಾಕಿ ರಾಜಕೀಯ ಲಾಭ ಹುನ್ನಾರ ಪ್ರತಾಪ್ ಸಿಂಹರದ್ದು.ಅರಸು ರಸ್ತೆಯ ದರ್ಗಾ, ಇರ್ವೀನ್ ರಸ್ತೆಯಲ್ಲಿರುವ ಮಸೀದಿ ಎರಡೂ ವಿಚಾರ ಕೋರ್ಟ್ ನಲ್ಲಿದೆ. ಇದನ್ನು ಕೆಡವಿ ಎಂದು ಕೆಡಿಪಿ ಸಭೆಯಲ್ಲಿ ಸಂಸದರು ಆಗ್ರಹಿಸಿರುವುದು ತಪ್ಪು ಎಂದು ಕಾಂಗ್ರೆಸ್ ನಿಯೋಗ ಕಿಡಿಕಾರಿದೆ.

Key words: Complaint -against -Mysore DC –against- Pratap Simha