ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ಪೊಲೀಸರಿಗೆ ದೂರು

 

ಬೆಂಗಳೂರು, ಮೇ 27, 2020 : ( www.justkannada.in news ) ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿರುದ್ಧ ವಿಧಾನಪರಿಷತ್ ನ ಕಾಂಗ್ರೆಸ್ ಸದಸ್ಯರಿಂದ ಪೊಲೀಸರಿಗೆ ದೂರು. ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ ಕಾಂಗ್ರೆಸ್ ಎಂಎಲ್ಸಿಗಳು.

ಬಿಜೆಪಿ ರಾಜ್ಯಾಧ್ಯಕ್ಷರು ಇಲ್ಲಸಲ್ಲದ ಹೇಳಿಕೆ ನೀಡ್ತಿದ್ದಾರೆ. ಕೊವಿಡ್ ಕಡಿಮೆಯಾಗಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದು ಹೇಳಿಕೆ ನೀಡುತ್ತಾರೆ. ಮತ್ತೊಂದು ಕಡೆ ವಿಶ್ವ ಆರೋಗ್ಯ ಸಂಸ್ಥೆ ಯಲ್ಲಿ (ಡಬ್ಲ್ಯು ಹೆಚ್ ಓ) ಪ್ರಧಾನಿ ಮೋದಿ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಇದು ದೇಶದಲ್ಲಿ ಕೊವಿಡ್ ನಿಯಂತ್ರಣಕ್ಕೆ ತಂದದ್ದರಿಂದ ಕೊಟ್ಟಿದ್ದಾರೆ ಅಂತ ಹೇಳ್ತಾರೆ. ಈ ಹೇಳಿಕೆಗಳ ಮೂಲಕ ಜನರನ್ನ ದಾರಿತಪ್ಪಿಸುತ್ತಿದ್ದಾರೆ. ಕೂಡಲೇ ನವೀನ್ ಕುಮಾರ್ ಕಟೀಲು ಅವರ ಹೇಳಿಕೆಗಳ ಬಗ್ಗೆ ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

Complaint Againest- Naleen kumar kateel- by congress MLC'S - vidhanasodha police station

ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆಗಳು ವಿಶ್ವಸಂಸ್ಥೆ ಮತ್ತು ಅಧೀನ ಸಂಸ್ಥೆಗಳ ನೈಜ ಉದ್ದೇಶ ತಿರುಚುವಂತದ್ದಾಗಿದೆ. ಇದರಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ತಲೆ ತಗ್ಗಿಸುವಂತಾಗಿದೆ. ಜತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಕಲಂ 54 ರ ಅಡಿ ತಪ್ಪು ಎಸಗಿದ್ದಾರೆ. ಸಾರ್ವಜನಿಕವಾಗಿ ತಪ್ಪು ಹೇಳಿಕೆ ನೀಡುವ ಕೆಲಸ ಮಾಡಿದ್ದಾರೆ. ಈ ರೀತಿ ಅಸಂಬದ್ದ ಹೇಳಿಕೆ ನೀಡಿದ ಅವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ವಿಧಾನ ಪರಿಷತ್ ನ ಕಾಂಗ್ರೆಸ್ ಸದಸ್ಯರಾದ ಐವಾನ್ ಡಿಸೋಜಾ ಹಾಗೂ ಪ್ರಕಾಶ್ ರಾಥೋಡ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

key words : Complaint Againest- Naleen kumar kateel- by congress MLC’S – vidhanasodha police station