Wednesday, September 30, 2026

BDA Apartments

Home Crime ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ನೋಡ ನೋಡುತ್ತಿದ್ದಂತೆ ನೆಲಕ್ಕುರುಳಿದ ಹೈಟೆನ್ಷನ್ ವಿದ್ಯುತ್ ಕಂಬ.

ಬೆಂಗಳೂರು-ಮೈಸೂರು ಹೆದ್ದಾರಿ ಬಳಿ ನೋಡ ನೋಡುತ್ತಿದ್ದಂತೆ ನೆಲಕ್ಕುರುಳಿದ ಹೈಟೆನ್ಷನ್ ವಿದ್ಯುತ್ ಕಂಬ.

ಮಂಡ್ಯ,ಜನವರಿ,12,2024(www.justkannada.in): ನೋಡನೋಡುತ್ತಿದ್ದಂತೆ ಹೈಟೆನ್ಷನ್ ವಿದ್ಯುತ್ ಕಂಬ ನೆಲಕ್ಕುರುಳಿದ ಘಟನೆ ಮಂಡ್ಯ ತಾಲ್ಲೂಕಿನ ರಾಗಿಮುದ್ದನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿಈ ಘಟನೆ ನಡೆದಿದೆ. ಹೈ ಟೆನ್ಷನ್ ವಿದ್ಯುತ್ ಕಂಬದಲ್ಲಿ ಕ್ಲಾಂಪ್ ಕಳ್ಳತನದಿಂದಾಗಿ ವಿದ್ಯುತ್ ಕಂಬ ರಸ್ತೆ ಉರುಳಿಬಿದ್ದಿದೆ ಎನ್ನಲಾಗಿದೆ.   ಈ ವೇಳೆ ಮಂಡ್ಯದಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ನಿವಾಸಿ ಸುರೇಶ್ ಅಪಾಯದಿಂದ ಪಾರಾಗಿದ್ದಾರೆ.  ಇನ್ನು ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಬೆಂಗಳೂರು electric (1) electric 1

ಸರ್ವಿಸ್ ರಸ್ತೆಗೆ ಬೃಹತ್ ಕಂಬ ಬೀಳುತ್ತಿದ್ದಂತೆ ವಾಹನಗಳು ಮುಂದೆ ಚಲಿಸದೇ ರಸ್ತೆಗೆ ನಿಂತಿದ್ದು  ಕಿಲೋಮೀಟರ್ ಉದ್ದಕ್ಕೂ ವಾಹನಗಳು ನಿಂತು ಟ್ರಾಫಿಕ್ ಜಾಮ್ ಉಂಟಾಗಿತ್ತು.

Key words: collapsed-high tension –electric- pole -near – Bangalore-Mysore highway