Sunday, September 13, 2026

BDA Apartments

Home Front Page ಸಿಎಂ ಸಿದ್ದರಾಮಯ್ಯ ಪರ ಶಾಸಕ ಜಿಟಿಡಿ ಹೇಳಿಕೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಸಿಎಂ ಸಿದ್ದರಾಮಯ್ಯ ಪರ ಶಾಸಕ ಜಿಟಿಡಿ ಹೇಳಿಕೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ

ಹುಬ್ಬಳ್ಳಿ, ಅಕ್ಟೋಬರ್,5,2024 (www.justkannada.in): ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪರ ಮಾತನಾಡಿದ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡರ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರುತು ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಶಾಸಕ ಜಿ.ಟಿ ದೇವೇಗೌಡರ ಹೇಳಿಕೆಯಿಂದ ಬಿಜೆಪಿಗೆ ಯಾವುದೇ ಡ್ಯಾಮೇಜ್ ಆಗಲ್ಲ.  ಮೊನ್ನೆ ಜಿಟಿ ದೇವೇಗೌಡರು ಸಿಎಂ ಸಿದ್ದರಾಮಯ್ಯನ ವಿರುದ್ದ ಮಾತಾಡಿದ್ರು.  ಈಗ ಏಕಾಏಕಿ ಸಿದ್ದರಾಮಯ್ಯ ಪರ ಮಾತಾಡಿದ್ದಾರೆ. ಸರ್ಕಾರದ ವಿರುದ್ದ ಸಾಲು ಸಾಲು ಹಗರಣ  ಕೇಳಿ ಬಂದಿದೆ ಇಂತಹ ಸಮಯದಲ್ಲಿ ಜಿಟಿ  ದೇವೇಗೌಡ ಹೇಳಿಕೆ ಸರಿಯಲ್ಲ. ಸ್ಥಾನಮಾನ ಸಿಗದಿದ್ದಕ್ಕೆ ಪಕ್ಷದ ವಿರುದ್ದ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.

ಮೈಸೂರು ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶಾಸಕ ಜಿ.ಟಿ ದೇವೇಗೌಡರು, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ರಾಜೀನಾಮೆ ಕೊಡುವುದಾದರೇ ಎಫ್ ಐಆರ್ ಆಗಿರುವ ಎಲ್ಲಾ ನಾಯಕರೂ ಕೊಡಲಿ ಎಂದಿದ್ದರು.

ಸಿಎಂ ಸಿದ್ದರಾಮಯ್ಯ ಪರ ಶಾಸಕ ಜಿಟಿಡಿ ಹೇಳಿಕೆ VTU TOP BANNER 04

Key words: CM Siddaramaiah, MLA GT Devegowda, statement, Union Minister, Prahlad Joshi