Sunday, August 23, 2026

BDA Apartments

Home Front Page  ಸಿಎಂ ಸಿದ್ದರಾಮಯ್ಯ ಅಣತಿಯಂತೆ ಲೋಕಾಯುಕ್ತ ವಿಚಾರಣೆ- ಸ್ನೇಹಮಯಿ ಕೃಷ್ಣ ಆರೋಪ

 ಸಿಎಂ ಸಿದ್ದರಾಮಯ್ಯ ಅಣತಿಯಂತೆ ಲೋಕಾಯುಕ್ತ ವಿಚಾರಣೆ- ಸ್ನೇಹಮಯಿ ಕೃಷ್ಣ ಆರೋಪ

ಮೈಸೂರು,ನವೆಂಬರ್,7,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅಣತಿಯಂತೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ನಿನ್ನೆ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ಅಧಿಕಾರಿಗಳ ವಿಚಾರಣೆ ಎದುರಿಸಿದ ಕುರಿತು ಮಾತನಾಡಿದ ಸ್ನೇಹಮಯಿ ಕೃಷ್ಣ, ಸಿಎಂ ಸಿದ್ದರಾಮಯ್ಯ ಟೈಮ್ ನಿಗದಿಪಡಿಸಿ ಹೋಗಿದ್ದಾರೆ. 10 ರಿಂದ 12  ಗಂಟೆವರೆಗೆ ಹಾಜರಾಗುತ್ತೇನೆ ಎಂದು  ಟೈಂ ನಿಗದಿಪಡಿಸಿ ವಿಚಾರಣೆಗೆ ಬಂದಿದ್ದಾರೆ. ಸಿಎಂ ಹೇಳಿದಂತೆ ಲೋಕಾಯುಕ್ತ ಅಧಿಕಾರಿಗಳು  2ಗಂಟೆ ವಿಚಾರಣೆ ನಡೆಸಿ ಮುಗಿಸಿದ್ದಾರೆ ಎಂದು ಕಿಡಿಕಾರಿದರು.

1ನೇ ಆರೋಪಿ ವಿಚಾರಣೆ ಒಳಪಡಿಸಬೇಕಾದ  ಅಂಶದ ಬಗ್ಗೆ  ತಿಳಿಸಿದ್ದೆ. ಆದರೆ ಕೇವಲ 1 ಗಂಟೆ 45 ನಿಮಿಷ ಮಾತ್ರ ವಿಚಾರಣೆ ಮಾಡಲಾಗಿದೆ. ನಿಜವಾಗಿಯೂ ಇಷ್ಟೊಂದು ದಾಖಲೆ ವಿಚಾರಣೆ ಮಾಡಲು ಒಂದು ಮುಕ್ಕಾಲು ಗಂಟೆ ಸಾಲುವುದಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ ಎಂದು ಹೇಳಿದರು.

Key words: CM Siddaramaiah, Lokayukta, hearing, Snehamayi krishna