ಹಿರಿಯ ನಟಿ ಲೀಲಾವತಿ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿಎಸ್ ವೈ.

ಬೆಂಗಳೂರು,ಡಿಸೆಂಬರ್,9,2023(www.justkannada.in):  ವಯೋಸಹಜ ಅನಾರೋಗ್ಯದಿಂದ ನಿನ್ನೆ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ಪಾರ್ಥೀವ ಶರೀರವನ್ನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.

ರವೀಂದ್ರ ಕಲಾಕ್ಷೇತ್ರಕ್ಕೆ  ಆಗಮಿಸಿದ ಸಿಎಂ ಸಿದ್ದರಾಮಯ್ಯ  ಹಿರಿಯ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದು ನಟ ವಿನೋದ್ ರಾಜ್ ಅವರಿಗೆ ಸಾಂತ್ವನ ಹೇಳಿದರು.

ನಂತರ ಬಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಿರಿಯ ನಟಿ ಲೀಲಾವತಿ ಅವರಿಗೆ ಪುಷ್ಪನಮನ ಅರ್ಪಿಸಿ ಅಂತಿಮ ದರ್ಶನ ಪಡೆದು ನಟ ವಿನೋದ್ ರಾಜ್ ಗೆ ಸಾಂತ್ವನ ಹೇಳಿದರು.

ಇನ್ನು ಸ್ಯಾಂಡಲ್ ವುಡ್ ಗಣ್ಯರಾದ ನಟ ಉಪೇಂದ್ರ, ಕುಮಾರ್ ಗೋವಿಂದ್,  ಹಿರಿಯ ನಟ ದ್ವಾರಕೇಶ್, , ಶ್ರೀನಾಥ್, ನಟಿ ಸುಧಾರಾಣಿ, ಅವಿನಾಶ್ ಮಾಳವಿಕಾ ಅವರು ಸಹ ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆದರು.

Key words: CM Siddaramaiah- former CM -B.S yeddyurappa–senior actress- Leelavati