Sunday, September 27, 2026

BDA Apartments

Home Front Page ಸಿಎಂ ಆದ ಬಳಿಕ ಇಂದು ಮೊದಲ  ಜಿಲ್ಲಾ ಪ್ರವಾಸಕ್ಕೆ  ಮುಖ್ಯಮಂತ್ರಿ ಸಿದ‍್ಧರಾಮಯ್ಯ.

ಸಿಎಂ ಆದ ಬಳಿಕ ಇಂದು ಮೊದಲ  ಜಿಲ್ಲಾ ಪ್ರವಾಸಕ್ಕೆ  ಮುಖ್ಯಮಂತ್ರಿ ಸಿದ‍್ಧರಾಮಯ್ಯ.

ಬೆಂಗಳೂರು,ಜೂನ್,5,2023(www.justkannada.in):  ಸಿದ್ಧರಾಮಯ್ಯ ಸಿಎಂ ಆದ ಬಳಿಕ ಇಂದು ಮೊದಲ ಬಾರಿ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದಾರೆ.

ಇಂದು ಸಿಎಂ ಸಿದ್ಧರಾಮಯ್ಯ ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಬೆಳಿಗ್ಗೆ 11 ಗಂಟೆಗೆ ಹೆಚ್ ಎಎಲ್ ಏರ್ ಪೋರ್ಟ್ ನಿಂದ ಪ್ರವಾಸ  ಬೆಳೆಸಲಿದ್ದಾರೆ. ಮಧ್ಯಾಹ್ನ 12.30ಕ್ಕೆ ಜಿಲ್ಲಾ ಮಟ್ಟದ  ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಸಿದ್ಧರಾಮಯ್ಯ  ದಾವಣಗೆರೆ ಜಿಲ್ಲೆ ಸಮಗ್ರ ಅಭಿವೃದ್ದಿ ಬಗ್ಗೆ ಚರ್ಚಿಸಲಿದ್ದಾರೆ.sidd

ನಂತರ ದಾವಣಗೆರೆಯಲ್ಲಿ  ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಿಎಂ ಸಿದ್ದರಾಮಯ್ಯ ಸಂಜೆ 4.15ಕ್ಕೆ  ಹೆಚ್ ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

Key words: CM-Siddaramaiah – first -district -tour -after -becoming – CM.