ಮೈಸೂರು,ಆಗಸ್ಟ್,9,2025 (www.justkannada.in): ಮೈಸೂರಿನಲ್ಲಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದರು.
ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದು ಸಂತೋಷದಿಂದ ಶ್ರೀಮತಿ ಇಂದಿರಾ ಗಾಂಧಿ ಕಾಂಗ್ರೆಸ್ ಭವನ ನಿರ್ಮಾಣದ ಭೂಮಿ ಪೂಜೆಯಲ್ಲಿ ಭಾಗವಹಿಸಿದ್ದೇನೆ. ಇಷ್ಟು ವರ್ಷಗಳಾದರೂ ಕೂಡ ಕಾಂಗ್ರೆಸ್ ಪಕ್ಷಕ್ಕೆ ಸ್ವಂತ ಕಟ್ಟಡ ಇರಲಿಲ್ಲ. ಇಲ್ಲಿ ಹಿಂದೆ ದೇವರಾಜ ಅರಸು ಕಾಲದಲ್ಲಿ ಈ ಭೂಮಿಯನ್ನು ಕೊಟ್ಟಿದ್ದರು. ನಿಮ್ಮೆಲ್ಲರ ಸಹಕಾರದಿಂದ ಒಂದು ಭವ್ಯವಾದ ಕಾಂಗ್ರೆಸ್ ಭವನವನ್ನ ಆಗುತ್ತಿದೆ. ಇದಕ್ಕೆ ಹೆಚ್ಚಿನ ವಂತಿಕೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರಿಗೆ ಸಿಎಂ ಸಿದ್ದರಾಮಯ್ಯ ಕೋರಿದರು.
ಸ್ಥಳದಲ್ಲೇ 5 ಲಕ್ಷ ರೂ ದೇಣಿಗೆ ನೀಡಿದ ಮಾಜಿ ಶಾಸಕನ ತಂದೆ
ಇದೇ ವೇಳೆ ಮಾಜಿ ಶಾಸಕ ಎಚ್.ಪಿ ಮಂಜುನಾಥ್ ತಂದೆ ಪ್ರೇಮ್ ಕುಮಾರ್ ಅವರು ಸ್ಥಳದಲ್ಲೇ 5 ಲಕ್ಷ ರೂ. ದೇಣಿಗೆ ನೀಡಿದರು. 5 ಲಕ್ಷ ರೂ ಚೆಕ್ ಅನ್ನು ಸಿಎಂ ಸಿಎಂ ಸಿದ್ದರಾಮಯ್ಯ ಕೈಗೆ ಕೊಟ್ಟರು. ಈ ವೇಳೆ ಎಲ್ಲರೂ ತಮ್ಮ ತಮ್ಮ ಕೈಲಾದಷ್ಟು ಹಣ ಕೊಡಬೇಕು ಎಂದು ಪದಾಧಿಕಾರಿಗಳು, ಕಾರ್ಯಕರ್ತರಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು.
ಮತ ಖರೀದಿಯಿಂದ ಬಾದಾಮಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆದ್ದರು ಎಂಬ ಸಿಎಂ ಇಬ್ರಾಹಿಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ನನಗೆ ಗೊತ್ತಿಲ್ಲ.ಇಬ್ರಾಹಿಂ ನಮ್ಮ ಪಕ್ಷದಲ್ಲಿ ಇಲ್ಲ.. ಆ ಸಂಧರ್ಭದಲ್ಲಿ ಇಬ್ರಾಹಿಂ ನನ್ನ ಪರವಾಗಿ ಕೆಲಸ ಮಾಡಿದ್ದರು. ಮತ ಖರೀದಿ ಮಾಡಿದ್ದರು ಎಂಬುದು ನನಗೆ ಹೊಸ ವಿಚಾರ.ಈ ಬಗ್ಗೆ ನಾನು ಕೇಳೆ ಇರಲಿಲ್ಲ. ನಾನು ಬಾದಾಮಿಗೆ ಹೋಗಿದ್ದು ಎರೆಡು ದಿನ ಮಾತ್ರ ಎಂದರು.
ಸತ್ತವರು ಕೆಟ್ಟವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ರು ಎಂಬ ತಮ್ಮ ಭಾಷಣ ವೈರಲ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅದು ಸಾಧ್ಯ ಇದೆಯಾ? ಸತ್ತವರು ಮತ ಹಾಕಲು ಆಗುತ್ತಾ..? ನಾನು ಆ ರೀತಿ ಮಾತೇ ಆಡಿಲ್ಲ. ಒಂದು ವೇಳೆ ಸತ್ತವರು ಕೆಟ್ಟವರಿಂದ ಮತ ಹಾಕಿಸಿಕೊಂಡಿದ್ದರೆ ಅದಕ್ಕೆ ಜವಾಬ್ದಾರಿ ಯಾರು…? ಚುನಾವಣಾ ಆಯೋಗ ಅದಕ್ಕೆ ಜವಾಬ್ದಾರಿ ಹೊರಬೇಕಿತ್ತು. ಏನಿತ್ತು ಅದನ್ನ ನೋಡ ಬೇಕಿತ್ತು ಎಂದರು.
ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಹೆಚ್.ಸಿ ಮಹದೇವಪ್ಪ, ಶಾಸಕರಾದ ಹರೀಶ್ ಗೌಡ, ತನ್ವೀರ್ ಸೇಠ್, ರವಿಶಂಕರ್, ಎಂಎಲ್ ಸಿ ಯತೀಂದ್ರ ಸಿದ್ದರಾಮಯ್ಯ, ಗ್ಯಾರಂಟಿ ಅನುಷ್ಟಾನ ಸಮಿತಿಯ ಉಪಾಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಉಪಸ್ಥಿತರಿದ್ದರು
Key words: Mysore, CM Siddaramaiah, construction , Indira Gandhi, Congress Bhavan