Wednesday, August 12, 2026

BDA Apartments

Home Election 2024 ರಾಜ್ಯದಲ್ಲಿ 18 ರಿಂದ 20 ಸ್ಥಾನ ಗೆಲ್ಲೋದಾಗಿ ಸಿಎಂ ಹೇಳಿಕೆ: ಇದು ಜಗತ್ತಿನ 8ನೇ ಅದ್ಬುತ...

ರಾಜ್ಯದಲ್ಲಿ 18 ರಿಂದ 20 ಸ್ಥಾನ ಗೆಲ್ಲೋದಾಗಿ ಸಿಎಂ ಹೇಳಿಕೆ: ಇದು ಜಗತ್ತಿನ 8ನೇ ಅದ್ಬುತ ಎಂದ ಬಿ.ವೈ ವಿಜಯೇಂದ್ರ.

ಚಿಕ್ಕಮಗಳೂರು,ಏಪ್ರಿಲ್,10,2024 (www.justkannada.in): ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 18ರಿಂದ 20 ಸ್ಥಾನ ಗೆಲ್ಲುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ, ಇದು ಜಗತ್ತಿನ 8ನೇ ಅದ್ಬುತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವ್ಯಂಗ್ಯವಾಡಿದರು.

ತರೀಕೆರೆಯಲ್ಲಿ ಇಂದು ಮಾತನಾಡಿದ ಬಿವೈ ವಿಜಯೇಂದ್ರ, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ 28ಕ್ಕೆ 28ಕ್ಷೇತ್ರಗಳನ್ನು ಗೆಲ್ಲುತ್ತದೆ. ಸಿದ್ದರಾಮಯ್ಯ,  ಡಿಕೆ ಶಿವಕುಮಾರ್ ಗೆ ರಾತ್ರಿ ನಿದ್ದೆ ಬರುತ್ತಿಲ್ಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗುತ್ತದೆ.  ರಾಜ್ಯದಲ್ಲಿ ಇಂತಹ ಕೆಟ್ಟಸರ್ಕಾರ ಎಂದು ನೋಡಿಲ್ಲ ಎಂದು ಗುಡುಗಿದರು.

ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲುತ್ತದೆ.  ಮೋದಿ ಭಾರತವನ್ನ ದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಿದೆ.  ಮೋದಿ ಕೊಟ್ಟ ಪಡಿತರ ಅಕ್ಕಿಗೆ ಫೋಟೊ ಅಂಟಿಸಿ ಕಾಂಗ್ರೆಸ್ ಕೊಡುಗೆ ಅಂತಾ ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಪಿಎಂ ಕಿಸಾನ್ ಯೋಜನೆಯ ಹಣದ ಪಾಲು ನಿಲ್ಲಿಸಿದ್ರು. ಸರ್ಕಾರ ಕೊಡುತ್ತಿರುವುದಕ್ಕಿಂತ ಕಿತ್ತುಕೊಳ್ಳುವುದೇ ಹೆಚ್ಚು ರಾಜ್ಯದ ಯಾವುದೇ ಕ್ಷೇತ್ರದಲ್ಲಿ  1ರೂ. ಅಭಿವೃದ್ದಿಯಾಗಿಲ್ಲ.  ಬರದ ಪರಿಸ್ಥಿತಿಯಲ್ಲಿ ಪರಿಹಾರ ಕೊಡದೇ ಕೇಂದ್ರವನ್ನ ದೂರುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

Key words: CM siddaramaiah, bjp, B.Y. Vijayendra