Sunday, August 23, 2026

BDA Apartments

Home Front Page ಬರದ ನಡುವೆ ಈ ದೌಲತ್ತು ಬೇಕಿತ್ತಾ.? ಸಿಎಂ ಸಿದ್ಧರಾಮಯ್ಯ ವಿರುದ್ದ ಆರ್. ಅಶೋಕ್ ಕಿಡಿ

ಬರದ ನಡುವೆ ಈ ದೌಲತ್ತು ಬೇಕಿತ್ತಾ.? ಸಿಎಂ ಸಿದ್ಧರಾಮಯ್ಯ ವಿರುದ್ದ ಆರ್. ಅಶೋಕ್ ಕಿಡಿ

ಬೆಂಗಳೂರು,ಡಿಸೆಂಬರ್,22,2023(www.justkannada.in):ಸಚಿವ ಜಮೀರ್ ಅಹ್ಮದ್ ಖಾನ್  ಮತ್ತು ಸಿಎಂ ಸಿದ್ದರಾಮಯ್ಯ ಅವರು ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಬಿಜೆಪಿ ಮುಗಿಬಿದ್ದಿದ್ದು ಸಿಎಂ ಸಿದ್ದರಾಮಯ್ಯ ವಿರುದ್ದ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಜೆಟ್ ನಲ್ಲಿ ಪ್ರಯಾಣಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಆರ್.ಅಶೋಕ್,  ರಾಜ್ಯದಲ್ಲಿ ಬರ ಆವರಿಸಿ ಜನರು ಸಂಕಷ್ಟದಲ್ಲಿದ್ದಾರೆ. ನೀವು ಮಾತ್ರ ಜೆಟ್ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೀರಿ. ಸಿದ್ಧರಾಮಯ್ಯನವರೇ ಬರದ ನಡುವೆ ಈ ದೌಲತ್ತು ಬೇಕಿತ್ತಾ…? ಎಂದು ಹರಿಹಾಯ್ದಿದ್ದಾರೆ.

ಒಂದು ಕಡೆ ಮಕ್ಕಳು ಜೆಸಿಪಿಯಲ್ಲಿ ಹೋಗ್ತಾರೆ. ಮತ್ತೊಂದು ಕಡೆ ಸಿದ್ಧರಾಮಯ್ಯ ಜೆಟ್ ನಲ್ಲಿ ಹೋಗ್ತಾರೆ. ಇದು ಬೇಕಾಗಿತ್ತಾ ಇವರಿಗೆ? ಸಿದ್ಧರಾಮಯ್ಯನವರು ನಾವು ಸಮಾಜವಾದಿ ಸಮಾಜವಾದಿ ಅಂತ ಹೇಳ್ತಾರೆ. ಇದೇನಾ  ನಿಮ್ಮ ಸಮಾಜವಾದಿ ಧೋರಣೆ..? ಎಂದು ಗುಡುಗಿದರು.

Key words: CM Siddaramaiah – Airplane -Travel -R. Ashok