ತುಮಕೂರು,ಜನವರಿ,16,2026 (www.justkannada.in): ಇಂದು ತುಮಕೂರು ಜಿಲ್ಲೆಗೆ ಪ್ರವಾಸ ಕೈಗೊಂಡಿರುವ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಚಿವ ಕೆ.ಎನ್ ರಾಜಣ್ಣ ನಿವಾಸದಲ್ಲಿ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನೆಲೆಯಲ್ಲಿ ಮಾಜಿ ಸಚಿವ ಕೆಎನ್ ರಾಜಣ್ಣ ಔತಣಕೂಟ ಏರ್ಪಡಿಸಿದ್ದರು. ಊಟ ಸೇವಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೆಎನ್ ರಾಜಣ್ಣ ನಿವಾಸಸದಲ್ಲಿ ಸಿದ್ದಪಡಿಸಿದ್ದ ಊಟ ಚೆನ್ನಾಗಿತ್ತು ನನಗೆ ಹುಷಾರಿಲ್ಲ ಜ್ವರ ಇದ್ದುದ್ದರಿಂದ ಬಾಯಿ ಕೆಟ್ಟೋಗಿತ್ತು, ಕಾಲ್ ಸೂಪ್ ನಾಟಿಕೋಳಿ ಸಾರು ಮಾಡಿದ್ದರು ಎಂದರು.
ಕೆಎನ್ ರಾಜಣ್ಣಗೆ ಮತ್ತ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ರಾಜಣ್ಣಗೆ ಯಾವಗಲೂ ಸಿಹಿಸುದ್ದಿಯೇ ಇರುತ್ತೆ. ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡುತ್ತೇನೆ ಎಂದರು.
Key words: KN Rajanna, ministerial Post, CM Siddaramaiah







