ಶಾಮನೂರು ಶಿವಶಂಕರಪ್ಪ ಸಾರ್ಥಕ ಜೀವನ ನಡೆಸಿದ್ರು: ಅವರೊಬ್ಬ ಅಜಾತಶತ್ರು- ಸಿಎಂ ಸಿದ್ದರಾಮಯ್ಯ

ದಾವಣಗೆರೆ,ಡಿಸೆಂಬರ್,26,2025 (www.justkannada.in): ಶಾಮನೂರು ಶಿವಶಂಕರಪ್ಪ ಸಾರ್ಥಕ ಜೀವನ ನಡೆಸಿದ್ದರು. ಅವರೊಬ್ಬ ಅಜಾತಶತ್ರು ಎಂದು ಸಿಎಂ ಸಿದ್ದರಾಮಯ್ಯ ಬಣ್ಣಿಸಿದರು.

ಇಂದು ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ನಡೆದ ಶಾಮನೂರು  ಶಿವಶಂಕರಪ್ಪ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಶಿವಶಂಕರಪ್ಪ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ.  ಶಿವಶಂಕರಪ್ಪ ಅವರು ಕನಿಷ್ಠ 100 ವರ್ಷ ಬದುಕುವ ನಿರೀಕ್ಷೆ ಇತ್ತು. ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದಾಗ ನನಗೆ ಸನ್ಮಾನ ಮಾಡಿದ್ದರು ಇನ್ನೊಂದು ಚುನಾವಣೆಗೆ ಸ್ಪರ್ಧೆ ಮಾಡುವ ಬಗ್ಗೆಯೂ ಹೇಳಿದ್ದರು ಎಂದರು.

ನಿಜಕ್ಕೂ ಶಾಮನೂರು ಶಿವಶಂಕರಪ್ಪ ಸಾರ್ಥಕ ಜೀವನ ನಡೆಸಿದ್ದರು.  ಎಲ್ಲಾ ಪಕ್ಷಗಳಲ್ಲೂ ಅವರಿಗೆ ಸ್ನೇಹಿತರಿದ್ದರು.  ಅವರೊಬ್ಬ ಅಜಾತಶತ್ರು.  ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Key words: Shamanur Shivashankarappa, fulfilling, life, CM, Siddaramaiah