ಬೆಂಗಳೂರು,ಸೆಪ್ಟಂಬರ್,27,2025 (www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆಗುಂಡಿಗಳು ಹೆಚ್ಚಾಗಿದ್ದು ಅವುಗಳನ್ನ ಮುಚ್ಚುವಂತೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯವನ್ನ ಸರ್ಕಾರ ಮಾಡುತ್ತಿದೆ. ಈ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ನಗರ ಪ್ರದಕ್ಷಿಣೆ ಹಾಕಿ ಕಾಮಗಾರಿಯನ್ನ ಪರಿಶೀಲನೆ ನಡೆಸಿದ್ದಾರೆ.
ವಿಂಡ್ಸನ್ ಮ್ಯಾನರ್ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ರಸ್ತೆಗುಂಡಿಗಳನ್ನ ಮುಚ್ಚುವ ಕಾಮಗಾರಿ ಪರಿಶೀಲನೆ ನಡೆಸಿದರು ನಂತರ ಹೆಬ್ಬಾಳ್ ಫ್ಲೈಓವರ್ ನಿಂದ ಮಾನ್ಯತಾ ಟೆಕ್ ಪಾರ್ಕ್ ಗೆ ಹೋಗುವ ರಸ್ತೆಯಲ್ಲಿ ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ ರಸ್ತೆ ಮಧ್ಯದಲ್ಲೇ ಕಟ್ಟಡದ ಅವಶೇಷ ಸುರಿದಿದ್ದಕ್ಕೆ ಕಿಡಿ ಕಾರಿದರು. ಯಾಕೆ ಕಟ್ಟಡದ ಅವಶೇಷಗಳನ್ನ ರಸ್ತೆ ಮಧ್ಯೆ ಹಾಕಿದ್ದೀರಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ನಂತರ ಬೆನ್ನಿಗಾನಹಳ್ಳಿ ರಸ್ತೆಮ ಬಳಿಕ ವಿಬ್ ಗಯಾರ್ ರಸ್ತೆಯಲ್ಲಿ ಪರಿಶೀಲನೆ ನಡೆಸಿದರು. ಸಿಎಂ ಸಿದ್ದರಾಮಯ್ಯಗೆ ಸಚಿವರಾದ ಕೆ.ಜೆ ಜಾರ್ಜ್, ಭೈರತಿ ಸುರೇಶ್ ಸಿಎಸ್ ಶಾಲಿನಿ ರಜನೀಶ್, ಹಿರಿಯ ಅಧಿಕಾರಿಗಳಾದ ಮಹೇಶ್ವರ್ ರಾವ್ ತುಷಾರ್ ಗಿರಿನಾಥ್ ಸಾಥ್ ನೀಡಿದರು.
Key words: Bengaluru, City Rounds, CM Siddaramaiah, Inspection, road pothole, work