ಮೈಸೂರು,ಆಗಸ್ಟ್,9,2025 (www.justkannada.in): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದಾಗ ನಾನು ಡಿಸಿಎಂ ಹಾಗೂ ಹಣಕಾಸು ಸಚಿವನಾಗಿ ಕೆಲಸ ಮಾಡಿದೆ. ಮುಖ್ಯಮಂತ್ರಿಯಾಗಿದ್ದು ವರುಣಾ ಕ್ಷೇತ್ರದಿಂದ. ಹೀಗಾಗಿ ಎರಡು ಕ್ಷೇತ್ರದ ಜನರಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.
ವರುಣಾ ಕ್ಷೇತ್ರದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವರುಣಾ ಕ್ಷೇತ್ರಕ್ಕೆ 1107 ಕೋಟಿ ಅನುದಾನ ಕೊಟ್ಟಿದ್ದೇವೆ. ಕಾಂಗ್ರೆಸ್ ಸರ್ಕಾರ ಯಾವಾಗ ಅಧಿಕಾರಕ್ಕೆ ಬಂದಿದೆಯೋ ಎಲ್ಲಾ ಕಾಲದಲ್ಲೂ ಅಭಿವೃದ್ಧಿ ಕಾರ್ಯಕ್ರಮಗಳನ್ನ ಮಾಡಿದೆ. ಎಲ್ಲಾ ಜಾತಿಯ ಬಡವರಿಗೆ ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದೆ. ಸಮಾಜದಲ್ಲಿರುವ ಅಸಮಾನತೆ ಹೋಗಬೇಕು ಇದು ನಮ್ಮ ಉದ್ದೇಶ. ಸಮಾಜಸಲ್ಲಿ ಸಮಾನತೆ ಬರಬೇಕು. ಬಡವರ ಶ್ರೀಮಂತರ ಎಂಬ ಭೇದ ಭಾವ ಇರಬಾರದು. ಎಲ್ಲರಿಗೂ ಅವಕಾಶ ಸಿಗಬೇಕು ಇದಕ್ಕೆ ಅನೇಕ ಕಾರ್ಯಕ್ರಮಗಳನ್ನ ತಂದಿದ್ದೇವೆ. 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕನಾಗಿ ಬಂದೆ. ನಿಮ್ಮಲ್ಲರ ಆಶೀರ್ವಾದದಿಂದ ಪಕ್ಷೇತರ ಅಭ್ಯರ್ಥಿಯ ಶಾಸಕನಾಗಿದೆ. ಅಂದಿನ ರಾಮಕೃಷ್ಣ ಹೆಗೆಡೆಯವರು ಕಾವಲು ಸಮಿತಿಯ ಅಧ್ಯಕ್ಷರಾಗಿ ಮಾಡಿದರು. ಮಂತ್ರಿಯನ್ನ ಸಹ ಮಾಡಿದರು. ಈಗಾಗಲೇ ಮಂತ್ರಿಯಾಗಿ 41 ವರ್ಷ ಆಗಿದೆ. 2008ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲಿಲ್ಲ. ಅದರ ಬದಲಿಗೆ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದೆ. 6 ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದೆ. ವರುಣಾ ಕ್ಷೇತ್ರದಿಂದ ಮೂರು ಬಾರಿ ಗೆದಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದಾಗ ಡಿಸಿಎಂ ಹಾಗೂ ಹಣಕಾಸ ಸಚಿವನಾಗಿ ಕೆಲಸ ಮಾಡಿದೆ. ಮುಖ್ಯಮಂತ್ರಿಯಾಗಿದ್ದು ವರುಣಾ ಕ್ಷೇತ್ರದಿಂದ. ಎರಡು ಬಾರಿ ಈ ರಾಜ್ಯದ ಸಿಎಂ ಆಗಿದ್ದರೆ ವರುಣಾ ಕ್ಷೇತ್ರದ ಜನರ ಆಶೀರ್ವಾದದಿಂದ. ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಜನರಿಗೆ ಚಿರಋಣಿಯಾಗಿರುತ್ತೇನೆ. ವರುಣಾ ಚಾಮುಂಡೇಶ್ವರಿ ಕ್ಷೇತ್ರ ಜನರು ರಾಜಕೀಯದಲ್ಲಿ ಬೆಳೆಯಲು ನೀವೇ ಕಾರಣ. ಎರಡನೇ ಬಾರಿ ಸಿಎಂ ಆದ ಮೇಲೆ ವರುಣಾ ಕ್ಷೇತ್ರಕ್ಕೆ 1107 ಕೋಟಿ ಅನುದಾನ ಕೊಟ್ಟಿದ್ದೇನೆ. ಸರ್ಕಾರ ಅನೇಕ ಸವಲತ್ತುಗಳನ್ನ ಜನರಿಗೆ ಕೊಟ್ಟಿದೆ. ಫಲಾನುಭವಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ನಮ್ಮೆಲ್ಲರ ಕರ್ತವ್ಯ ಸಂವಿಧಾನ ಉಳಿಸಿಬೇಕು, ಪ್ರಜಾಪ್ರಭುತ್ವವನ್ನ ಬೆಳೆಸಬೇಕು. ನಾನು ಸಿಎಂ ಆಗಲು ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ. ನಾವು ಉಳಿಯಬೇಕಾದ್ರೆ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕಾದ್ರೆ ಸಂವಿಧಾನ ಉಳಿಸಬೇಕು. ಮುಂದಿನ ಚುನಾವಣೆಯಲ್ಲಿ ಶಕ್ತಿ ತುಂಬಬೇಕು. ಗುಲಗಂಜಿಯಷ್ಟು ಹೆಚ್ಚಾಗಿ ವರುಣಾ ಕ್ಷೇತ್ರಕ್ಕೆ ನಾನು ಕೆಲಸ ಮಾಡುತ್ತೇನೆ ಎಂದು ನುಡಿದರು.
ಶಕ್ತಿ ಯೋಜನೆಯಿಂದ ಸಾಕಷ್ಟು ಜನರಿಗೆ ಸಹಾಯವಾಗಿದೆ. ಗ್ಯಾರೆಂಟಿ ಯೋಜನೆ ಜಾರಿ ಮಾಡಿದ ಮೇಲೆ ಕರ್ನಾಟಕ ತಲಾ ಆದಾಯದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಎಲ್ಲಾ ರಾಜ್ಯಗಳಿಗಿಂತ ನಮ್ಮ ರಾಜ್ಯ ನಂಬರ್ ಒನ್ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಗ್ಯಾರೆಂಟಿ ಯೋಜನೆ. ಕರ್ನಾಟಕ ಆರ್ಥಿಕವಾಗಿ ಮೇಲೆ ಬರುವ ಕೆಲಸ ಆಗುತ್ತಿದೆ. ಜಿಎಸ್ಟಿ ಕಲೆಕ್ಷನ್ ನಲ್ಲಿ ದೇಶದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ನಮಗೆ ಸಹಕಾರ ಕೊಡುತ್ತಿಲ್ಲ. ನಮ್ಮ ಪಾಲಿನ ತೆರಿಗೆ ಹಣವನ್ನ ಕೊಡುತ್ತಿಲ್ಲ. 4.7% ನಮ್ಮ ಪಾಲು ಕೊಟ್ಟಿತ್ತು. 15 ನೇ ಹಣಕಾಸಿನ ಯೋಜನೆಯಿಂದ 4.7 ರಿಂದ 3.5 ಕ್ಕೆ ಇಳಿದಿದೆ. 2019ರ ಸಂಸತ್ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿಗೆ ಹೆಚ್ಚು ಸ್ಥಾನ ಸಿಕ್ಕಿದೆ. ಈ ಬಗ್ಗೆ ಸಂಸದರು ಧ್ವನಿ ಎತ್ತಬೇಕು. 11ಸಾವಿರ ಕೋಟಿ ನಮ್ಮ ಪಾಲಿನ ಹಣ ಕೊಡಬೇಕಿತ್ತು, ಇದನ್ನ ಕೊಟ್ಟಿಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ದೊಡ್ಡ ಅನ್ಯಾಯ ಮಾಡಿದೆ. ಕಾಂಗ್ರೆಸ್ ಲೋಕಸಭಾ ಸದಸ್ಯರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಅದರೂ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ಇದ್ರೆ ಅದು ನಮ್ಮ ಸರ್ಕಾರ
ನಾನು ಹೇಳುವುದರಲ್ಲಿ ಸುಳ್ಳಿದ್ರೆ ಒಂದೇ ವೇದಿಕೆ ಬರಲಿ ಎಂದು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ ಸಿಎಂ ಸಿದ್ದರಾಮಯ್ಯ, ಅನೇಕ ಬಾರಿ ಈ ಬಗ್ಗೆ ಹೇಳಿದ್ದೇನೆ. ದೇಶದಲ್ಲಿ ನುಡಿದಂತೆ ನಡೆದ ಸರ್ಕಾರ ಇದ್ರೆ ಅದು ನಮ್ಮ ಸರ್ಕಾರ. ನೀವು ನನ್ನನ್ನ ಮುಖ್ಯಮಂತ್ರಿ ಮಾಡಿದ ಕಾರಣ ಈ ಎಲ್ಲಾ ಕೆಲಸಗಳನ್ನ ಮಾಡಲು ಸಾಧ್ಯವಾಯ್ತು. ಮುಂದಿನ ಎರೆಡು ಮುಕ್ಕಾಲು ವರ್ಷ ನಾವು ಅಭಿವೃದ್ಧಿ ಕೆಲಸ ಮಾಡುತ್ತೇವೆ. ಉಳಿದ ಕೆಲಸ ಮಾಡುತ್ತೇವೆ. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ ಅದು ಸಿದ್ದರಾಮಯ್ಯ ಸರ್ಕಾರ ಎಂದರು.
ಬೆಂಗಳೂರಿನಲ್ಲಿ ಮತಗಳ್ಳತನ ಬಗ್ಗೆ ಪ್ರತಿಭಟನೆ ನಡೆಸಿದ್ದೇವೆ. ಬಿಜೆಪಿ ಮತಗಳ್ಳತನ ಮಾಡಿ ಇವಿಎಂ ದುರಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಒಂದು ಕ್ಷೇತ್ರದಲ್ಲಿ ಸಂಪೂರ್ಣವಾಗಿ ಸಂಶೋಧನೆ ಮಾಡಿದ್ದೇವೆ. ರಾಹುಲ್ ಗಾಂಧಿ ಮಾಧ್ಯಮಗಳ ಜೊತೆ ಮಾತನಾಡಿ ದಾಖಲೆಗಳನ್ನ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. 2008 ರಿಂದ 2013ರವರೆಗೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸದಾನಂದ ಗೌಡ ಸಿಎಂ ಆದರು. ಆಗ 113 ಸ್ಥಾನ ಬಂದಿರಲಿಲ್ಲ. ಜನರ ಆಶೀರ್ವಾದ ಪಡೆದು ಯಾವಾಗಲೂ ಅಧಿಕಾರಕ್ಕೆ ಬರಬೇಕು. ಸಂವಿಧಾನಕ್ಕೆ ವಿರೋಧ ನೀತಿ ಅನುಸರಿಸಿ ಬಿಜೆಪಿ ಎರೆಡು ಭಾರಿ ಅಧಿಕಾರಕ್ಕೆ ಬಂದಿದೆ. ಎರಡು ಬಾರಿ ಕೂಡ ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದೆ. ಬಿಜೆಪಿಗೆ ಅಧಿಕಾರದ ದಾಹ. ಬಿಜೆಪಿ ಯಾವತ್ತಿಗೂ ಸಂವಿಧಾನದ ಪರವಾಗಿ ಇರಲ್ಲ. ಅಂಬೇಡ್ಕರ್ ಅವರ ಹೆಸರನ್ನ ಹೇಳುತ್ತಾರೆ, ಆದರೆ ಸಂವಿಧಾನ ವಿರುದ್ಧ ಕೆಲಸ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
2013 ರಿಂದ 2018 ರವೆಗೆ ಸಿಎಂ ಆಗಿದ್ದೆ. 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೇನೆ. ಸಾಕಷ್ಟು ಕೆಲಸ ಮಾಡಿದರೂ 2018ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿಲ್ಲ. ಹೀಗಾಗಿ ಸಮಿಶ್ರ ಸರ್ಕಾರ ರಚನೆ ಮಾಡಿದ್ದವು. ಆದರೆ ಬಿಜೆಪಿ ಅಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದರು. ಕುಮಾರಸ್ವಾಮಿ 1ವರ್ಷ 2 ತಿಂಗಳು ಅಧಿಕಾರ ಮಾಡಿದ್ರು. ಅಪರೇಷನ್ ಕಮಲದ ಮೂಲಕ ಅಧಿಕಾರ ಹೋಯಿತು. ಸದ್ಯ ಹೆಚ್ ಡಿಕೆ ಈಗ ಅವರ ಜೊತೆಯಲ್ಲೇ ಇದ್ದಾರೆ ಇದೇ ವಿಪರ್ಯಾಸ. ಬಿಜೆಪಿ ಹಾಡಿ ಹೊಗಳುವ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ನ್ಯಾಯ, ತತ್ವ, ಸಂವಿಧಾನದ ಉಳಿವಿನ ಮೇಲೆ ಸಮಿಶ್ರ ಸರ್ಕಾರ ರಚನೆಯಾತು. ಬಿಜೆಪಿ ಈ ಭಾರಿ ಅಧಿಕಾರಕ್ಕೆ ಬಂದ ದಿನದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಆ ಆರೋಪಗಳಲ್ಲಿ ಯಾವುದೇ ಸತ್ಯ ಇಲ್ಲ ಎಂದರು.
2023 ವಿಧಾನಸಭಾ ಚುನಾವಣೆ ವೇಳೆ 5 ಗ್ಯಾರೆಂಟಿ ಯೋಜನೆ ಘೋಷಣೆ ಮಾಡಿದ್ದವು. ಈ ಗ್ಯಾರೆಂಟಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ದುಡ್ಡಿಲ್ಲ ಎಂದು ಆರೋಪ ಮಾಡಿದರು. ಖಜಾನೆ ಖಾಲಿಯಾಗುತ್ತೆ ಅಂದರು. ನರೇಂದ್ರ ಮೋದಿ ಗ್ಯಾರೆಂಟಿ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ ಅಂದರು. 5 ಗ್ಯಾರೆಂಟಿ ಯೋಜನೆ ಜಾರಿ ಮಾಡಿದ್ದೇವೆ. ಅಧಿಕಾರಕ್ಕೆ ಎಲ್ಲಾ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಈ ಕಾರ್ಯಕ್ರಮಗಳಿಗೆ 55 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದ್ದೇವೆ. ಯೂನಿವರ್ಸಲ್ ಬೇಸಿಕ್ ಇನಕಮ್ ಎಂದು ಯೂರಪ್ ರಾಷ್ಟ್ರಗಳಲ್ಲಿ ಹೇಳುತ್ತಾರೆ. ಬಿಜೆಪಿ ಗ್ಯಾರೆಂಟಿ ಯೋಜನೆ ಜಾರಿ ಮಾಡಿದ ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ ಎಂದು ಹೇಳುತ್ತಾರೆ. ನಮ್ಮ ಸರ್ಕಾರಿ ಕಾರ್ಯಕ್ರಮಗಳಿಗೆ ಬಂದು ನೋಡಿ ದುಡ್ಡಿಲ್ಲದೆ ಈ ಕಾರ್ಯಕ್ರಮ ಮಾಡಲು ಸಾಧ್ಯನಾ. ಬಿಜೆಪಿ ಸುಳ್ಳು ಹೇಳಿ ಜನರನ್ನ ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಹರಿಹಾಯ್ದರು.
Key words: Varuna, Chamundeshwari, constituency, CM, Siddaramaiah