ಬಿಜೆಪಿ ಚಾರ್ಜ್ ಶೀಟ್ ನಲ್ಲಿ ಬರೀ ಸುಳ್ಳು: ಅಭಿವೃದ್ದಿ ಬಗ್ಗೆ ಕೆ.ಆರ್ ನಗರಕ್ಕೆ ಬಂದು ಒಮ್ಮೆ ನೋಡಿ- ಸಿಎಂ ಸಿದ್ದರಾಮಯ್ಯ

ಮೈಸೂರು,ಮೇ,23,2025 (www.justkannada.in): ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ಬರೀ ಸುಳ್ಳುಗಳಿವೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಅಂತಾರೆ. ಕೆ.ಆರ್.ನಗರಕ್ಕೆ ಬಿಜೆಪಿ- ಜೆಡಿಎಸ್ ನಾಯಕರು ಬಂದು ನೋಡಿ. ಇಷ್ಟೊಂದು ಅಭಿವೃದ್ಧಿ ಸಾಧ್ಯವೇ? ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು.

ಮೈಸೂರಿನ ಕೆ.ಆರ್.ನಗರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ- ಜೆಡಿಎಸ್ ಪಕ್ಷದವರು ಟೀಕೆಗಳನ್ನು ಮಾಡ್ತಾರೆ. ಗ್ಯಾರೆಂಟಿ‌ ಯೋಜನೆ ಜಾರಿಯಾಗಿದ್ದರಿಂದ ಅಭಿವೃದ್ಧಿ ಕೆಲಸಗಳಿಗೆ ದುಡ್ಡಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಅಂತಾರೆ. ಕೆ.ಆರ್.ನಗರಕ್ಕೆ ಬಿಜೆಪಿ- ಜೆಡಿಎಸ್ ನಾಯಕರು ಬಂದು ನೋಡಿ. ಪಾಪಾರ್ ಆಗಿದೆ ಅಂತ ನೀವು ಹೇಳುವ ಸರ್ಕಾರ ಇಷ್ಟೊಂದು ಅಭಿವೃದ್ಧಿ ಸಾಧ್ಯವೇ? ಬಿಜೆಪಿ- ಜೆಡಿಎಸ್ ಪಕ್ಷದವರು ಸುಳ್ಳು ಹೇಳುವುದನ್ನ ಬಿಡಲ್ಲ. ಅವರು ಅಧಿಕಾರದಲ್ಲಿದ್ದಾಗ ಏನೂ ಕೂಡ ಕೆಲಸ ಮಾಡಿಲ್ಲ. ನಿಮ್ಮ ಎದುರು ಶಂಕುಸ್ಥಾಪನೆ ಮಾಡಿರುವುದು ಸುಳ್ಳಾ? ಅವರಿಗೆ ನಾಚಿಕೆ ಮಾನ- ಮರ್ಯಾದೆ ಇಲ್ವಾ? ಅಶೋಕ್ , ಛಲವಾದಿ ನಾರಾಯಣಸ್ವಾಮಿ, ಕುಮಾರಸ್ವಾಮಿ,‌ ಯಡಿಯೂರಪ್ಪ, ವಿಜಯೇಂದ್ರ ಬಹಳ ವರ್ಷದಿಂದ ರಾಜಕಾರಣದಲ್ಲಿ ಇದ್ದಾರೆ. ಅವರು ನಿರಂತರವಾಗಿ ಸುಳ್ಳು ಹೇಳುತ್ತಿದ್ದಾರೆ. ಅವರು ಹೇಳುತ್ತಿರುವುದು ಸುಳ್ಳಲ್ಲವೇ? ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರ ನೀಡಿರುವ ಭರವಸೆ ಈಡೇರಿಸಿದೆ. ಪಂಚ‌ ಯೋಜನೆಗಳನ್ನ ಸುಳ್ಳು ಅಂತ ಹೇಗೆ ಹೇಳುತ್ತೀರಿ. ರಾಜ್ಯದ ಮೂರುವರೆ ಕೋಟಿ ಮಹಿಳೆಯರು ಫ್ರೀಯಾಗಿ ಬಸ್ ನಲ್ಲಿ ತಿರುಗಾಡುತ್ತಾರೆ. ಯಾವುದೇ ಜಾತಿ, ಧರ್ಮ, ಭಾಷೆ ತಾರತಮ್ಯವಿಲ್ಲದೆ ಓಡಾಡುತ್ತಿದ್ದಾರೆ. ಒಟ್ಟಾರೆ ಈವರಗೆ 500 ಕೋಟಿ ಮಹಿಳೆಯರು ಪ್ರತಿನಿತ್ಯ ಫ್ರೀಯಾಗಿ ಓಡಾಡಿದ್ದಾರೆ. ಕೆಲಸದ ಸ್ಥಳ, ದೇವಸ್ಥಾನ ಎಲ್ಲಾ ಕಡೆ ಓಡಾಡಬಹುದು. ಧರ್ಮಸ್ಥಳದ ವಿರೇಂದ್ರ ಹೆಗ್ಡೆ ಪತ್ರ ಬರೆದಿದ್ದರು. ಅವರು ಬಿಜೆಪಿ ರಾಜ್ಯಸಭಾ ಸದಸ್ಯರಾಗಿದ್ದಾರೆ. ಎಲ್ಲಾ ಹೆಣ್ಣುಮಕ್ಕಳಿಗೆ‌ ಉಚಿತ ಯೋಜನೆ ನೀಡಿದ್ದೀರಿ. ಈ ಕಾರಣಕ್ಕೆ ದೇವಸ್ಥಾ‌ನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ದೇಗುಲದ ಆದಾಯ ಹೆಚ್ಚಾಗಿದೆ ಎಂದು ಪತ್ರ ಬರೆದಿದ್ದರು ಎಂದು ಸ್ಮರಿಸಿದರು.

ಎರಡು ವರ್ಷದ ಸಮಾವೇಶಕ್ಕೆ ಲಕ್ಷಾಂತರ ಜನ ಬಂದಿದ್ದರು. ಇದನ್ನ ಕಂಡು‌ ಬಿಜೆಪಿಯವರು ಜನಾಕ್ರೋಶ ಕಾರ್ಯಕ್ರಮ ಮಾಡುತ್ತೀವಿ ಅಂದರು. ರಾಜಕೀಯ ಕಾರಣಕ್ಕಾಗಿ ಈ ರೀತಿ ಅಪಪ್ರಚಾರ. ಬಿಜೆಪಿಯವರಿಗೆ ರಾಜ್ಯಸರ್ಕಾರ ಕಂಡ್ರೆ ಹೊಟ್ಟೆ ಉರಿ. ಅವರು ನಾಲ್ಕುವರ್ಷ ಏನೂ ಅಭಿವೃದ್ಧಿ ಮಾಡಲಿಲ್ಲ. ಗ್ಯಾರೆಂಟಿ ಯೋಜನೆಗೆ ಈವರಗೆ 90 ಸಾವಿರ ಕೋಟಿ ಹಣ ಖರ್ಚಾಗಿದೆ. ಇದಲ್ಲದೇ 60 ಸಾವಿರ ಕೋಟಿ ಹಣವನ್ನ ವಿವಿಧ ಯೋಜನೆಗೆ ಉಚಿತವಾಗಿ ನೀಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರು ಲೂಟಿ ಹೊಡೆದು ಹೊರಟು ಹೋದರು. 2 ಲಕ್ಷದ 70 ಸಾವಿರ ಕೋಟಿ ರೂ ಹಣದ ಯೋಜನೆ ಬಿಡುಗಡೆ ಮಾಡಿದರು. ದುಡ್ಡು ಹೊಡೆಯಲು‌ ಯೋಜನೆ ಘೋಷಿಸಿ ಹೋದರು. ಅದೆಲ್ಲದರ‌ ಹೊಣೆ ನಮ್ಮ ಸರ್ಕಾದರ ಮೇಲೆ ಬಿತ್ತು. ಇಷ್ಟೆಲ್ಲ ಭಾರ ಹೊತ್ತು ನಾವು ಜನಪರ ಕಾರ್ಯಕ್ರಮ ಮಾಡಿದ್ದೇವೆ.ಇನ್ನೂ ಮೂರು‌ ವರ್ಷದೊಳಗೆ ಮತ್ತಷ್ಟು ಕೆಲಸ ಮಾಡುತ್ತೇವೆ. ಕೆ.ಆರ್.ನಗರದಲ್ಲಿ ಹಿಂದೆ ಹಾಳು ಮಾಡಿದರು. ನಿಮ್ಮ ಆಶೀರ್ವಾದಿಂದ ರವಿಶಂಕರ್  ಗೆದ್ದು ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕೂಡ ನೀವು ಆಶೀರ್ವಾದ ಮಾಡಬೇಕು. ರವಿಶಂಕರ್ ಒಬ್ಬ ಕೆಲಸಗಾರ ಎಂದು ಸಿಎಂ‌ ಸಿದ್ದರಾಮಯ್ಯ ಬಣ್ಣಿಸಿದರು.

ರವಿ ಶಂಕರ್ ಒಳ್ಳೆಯ ವ್ಯಕ್ತಿ. ಮುಂದಿನ ಚುನಾವಣೆಯಲ್ಲೂ ಆಶೀರ್ವಾದ ಮಾಡಿ..

ಡಿ. ರವಿಶಂಕರ್ ಅವರು ಒಳ್ಳೆಯ ವ್ಯಕ್ತಿ ನೀವು ಮುಂದಿನ ಚುನಾವಣೆಯಲ್ಲೂ ಅವರಿಗೆ ಆಶೀರ್ವಾದ ಮಾಡಬೇಕು. ಜನಾಕ್ರೋಶ ಯಾತ್ರೆ ಇರೋದು ರಾಜಕೀಯ ಮಾತ್ರ ಜನರಿಗೆ ಯಾವ ಆಕ್ರೋಶ ಇಲ್ಲ. ಏಕೆಂದ್ರೆ KR ನಗರ ಕ್ಷೇತ್ರದಲ್ಲಿ ಇಷ್ಟೊಂದು ಜನ ಬರುತ್ತಿರಲಿಲ್ಲ. 593 ಕಾರ್ಯಕ್ರಮಗಳನ್ನ ವಿಧಾನಸಭಾ ಚುನಾವಣೆಗೆ ಮುಂಚೆ ಭರವಸೆ ಕೊಟ್ಟಿದ್ದವು. ಈಗ ಎರಡು ವರ್ಷ ಅವಧಿಯಲ್ಲಿ 242 ಭರವಸೆ ಈಡೇರಿಸಿದ್ದೇವೆ. ಇನ್ನು ಮೂರು ವರ್ಷದ ಅವಧಿಯಲ್ಲಿ ಅದನ್ನೂ ಈಡೇರಿಸುತ್ತೆ. ಬಿಜೆಪಿ ಏನೂ ಮಾಡಿಲ್ಲ ಎಲ್ಲಾ ಲೂಟಿ ಹೊಡೆದು ಹೋದರು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ  ಅವರು  2.70ಲಕ್ಷ ಸಾವಿರ ಕೋಟಿ ಮಂಜೂರಾತಿ ಕೊಟ್ಟರು ಎಂದು ಆರೋಪಿಸಿದರು.

ಹಾಲಿನ ದರ 4 ರೂಪಾಯಿ ಹೆಚ್ಚು ಮಾಡು ಸರಕಾರ ದುಡ್ಡು ತೆಗೆದು ಕೊಳ್ಳಲಿಲ್ಲ. ನೇರವಾಗಿ ರೈತರಿಗೆ ಕೊಡಿ ಎಂದು ಹೇಳಿದ್ದೆ. ಇಷ್ಟೆಲ್ಲಾ ಆದರೂ ಪಕ್ಕದ ರಾಜ್ಯಕ್ಕಿಂತ ನಮ್ಮಲ್ಲಿ ಕಡಿಮೆ ಇದೆ. ಬಿಜೆಪಿ ಅವ್ರು ನರೇಂದ್ರ ಮೋದಿ ಅವರು ಹೆಚ್ಚು ಮಾಡಿರುವ ಬಗ್ಗೆ ಮಾತನಾಡುವುದಿಲ್ಲ. ಪೆಟ್ರೋಲ್ ಡೀಸೆಲ್ ಬೆಲೆ ಮನಮೋಹನ್ ಸಿಂಗ್ ಇದ್ದಾಗ ಎಷ್ಟು ಇತ್ತು ಇವಾಗ ಎಷ್ಟಿದೆ. ನರೇಂದ್ರ ಮೋದಿ ಬಂದು ಎಲ್ಲದರ ಬೆಲೆ ಹೆಚ್ಚಾಗಿದೆ. ಚಿನ್ನದ ಬೆಲೆ ಎಷ್ಟಾಗಿದೆ ಏಳ್ರಮ್ಮ ತಾಯಿ. ಬಡವರು ಎಲ್ಲಿ ಚಿನ್ನ ತೆಗೆದುಕೊಳ್ಳುವುದು. ಬಿಜೆಪಿ ಮಾಡಿರುವುದನ್ನ ಕಾಂಗ್ರೆಸ್ ಸರಿಪಡಿಸುವ ಕೆಲಸ ಮಾಡುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

Key words: BJP, lies: Come, KR Nagar, development , CM Siddaramaiah