Thursday, August 6, 2026

BDA Apartments

Home Front Page  ‘ಕೈ’ ಟಿಕೆಟ್ ಕಗ್ಗಂಟು: ಒಳ್ಳೆಯ ತೀರ್ಮಾನ ಆಗಬಹುದು- ಸಿಎಂ ಇಬ್ರಾಹಿಂ

 ‘ಕೈ’ ಟಿಕೆಟ್ ಕಗ್ಗಂಟು: ಒಳ್ಳೆಯ ತೀರ್ಮಾನ ಆಗಬಹುದು- ಸಿಎಂ ಇಬ್ರಾಹಿಂ

ಬೆಂಗಳೂರು,ಮಾರ್ಚ್,21,2026 (www.justkannada.in): ದಾವಣಗೆರೆ ದಕ್ಷಿಣ ವಿಧಾನಸಭೆ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದ್ದು, ಈ ಕುರತು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ, ಬಹುತೇಕ ಒಳ್ಳೆಯ ತೀರ್ಮಾನ ಆಗಬಹುದು ಎಂದಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ,  ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಬಗ್ಗೆ ಕಾಂಗ್ರೆಸ್ ಏನು ತೀರ್ಮಾನ ಮಾಡುತ್ತೋ ನನಗೆ ಗೊತ್ತಿಲ್ಲ. ಮುಸಲ್ಮಾನ ನಾಯಕರು ಎಷ್ಟು ಶಕ್ತಿ ತೋರಿಸುತ್ತಾರೆ ನೋಡೋಣ. ಎಲ್ಲರು ಒಂದಾಗಿ ಟಿಕೆಟ್ ಕೇಳಿದ್ದಾರೆ.  ಏನು ನಿರ್ಣಯ ಆಗುತ್ತೆ ನೋಡೋಣ.  ಬಹುತೇಕವಾಗಿ ಒಳ್ಳೆಯ ತೀರ್ಮಾನ ಆಗಬಹುದು  ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದಕ್ಷಿಣ ವಿಧಾನಸಭೆ ಉಪ ಚುನಾವಣೆಯ ಟಿಕೆಟ್ ಗಾಗಿ ದಿ.ಶಾಮನೂರು ಶಿವಶಂಕರಪ್ಪ ಮೊಮ್ಮಗ ಸಮರ್ಥ ಶಾಮನೂರು ಬೇಡಿಕೆ ಇಟ್ಟಿದ್ದು ಈಗಾಗಲೇ ಟಿಕೆಟ್ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇತ್ತ ಹಲವು ಮುಖಂಡರು ಮುಸ್ಲೀ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದು ಇಂದು ಅಥವಾ ನಾಳೆ ಅಭ್ಯರ್ಥಿ ಹೆಸರು ಘೋಷಣೆಯಾಗಬಹುದು.

Key words:  congress ticket, controversy, CM Ibrahim