Thursday, September 17, 2026

BDA Apartments

ಉಡುಪಿಗೆ ದೌಡಾಯಿಸಿದ ಸಚಿವ ಸಿಸ್ BDA JK_Adv BDA Adv
Home Front Page ಉಡುಪಿಗೆ ದೌಡಾಯಿಸಿದ ಸಚಿವ ಸಿಸ್ ಪುಟ್ಟರಾಜು

ಉಡುಪಿಗೆ ದೌಡಾಯಿಸಿದ ಸಚಿವ ಸಿಸ್ ಪುಟ್ಟರಾಜು

ಸಚಿವ ಸಿಎಸ್ ಪುಟ್ಟರಾಜು ಕರೆಸಿಕೊಂಡು ಮಂಡ್ಯ ಚುನಾವಣಾ ಚುನಾವಣೋತ್ತರ ಸಮೀಕ್ಷೆ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ
ಉಡುಪಿ, ಮೇ, 1, 2019(www.justkannada.in): ಉಡುಪಿಯ ಕಾಪು ಬಳಿ ಇರುವ ಸಾಯಿರಾಧ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ್ದೇ ಚಿಂತೆ ಕಾಡಿದೆ.
ಹೌದು ಮಂಡ್ಯ ಲೋಕಸಭಾ ಚುನಾವಣೆಗೆ ಮತದಾನ ಮುಗಿದಿದ್ದು ಮೇ 23ರಂದು ಫಲಿತಾಂಶ ಹೊರ ಬೀಳಲಿದೆ. ಈ ನಡುವೆ ತಮ್ಮ ಪುತ್ರನ ಗೆಲುವಿಗಾಗಿ ಮಂಡ್ಯದಲ್ಲಿ ನಿರಂತರ ಪ್ರಚಾರ ನಡೆಸಿದ್ದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಇದೀಗ ಉಡುಪಿಯ ಕಾಪು ಬಳಿಯ ಸಾಯಿರಾಧ ರೆಸಾರ್ಟ್ ನಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಧ್ಯೆ ಸಿಎಂ ಹೆಚ್.ಡಿ ಕುಮಾರಸ್ವಾಮಿ. ನಿನ್ನೆ ರಾತ್ರಿ ಸಚಿವ ಸಿ.ಎಸ್ ಪುಟ್ಟರಾಜು ಅವರನ್ನ ಕರೆಸಿಕೊಂಡು ಮಂಡ್ಯ ಚುನಾವಣಾ ಲೆಕ್ಕಾಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮಂಡ್ಯ ಚುನಾವಣೋತ್ತರ ಸಮೀಕ್ಷೆ ಕುರಿತು ಮಾಹಿತಿ

ಕಲೆ ಹಾಕಿರುವ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಸಚಿವ ಸಿಎಸ್ ಪುಟ್ಟರಾಜು ಅವರ ಜತೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
CM H.D Kumaraswamy seeks information from minister C.S. Puttaraju regarding Mandya Loksabha elections.