ದೇಶದಲ್ಲಿ ಬುರ್ಖಾ ನಿಷೇಧಕ್ಕೆ ಶಿವಸೇನೆ ಆಗ್ರಹ

ನವದೆಹಲಿ,ಮೇ,1,2019(www.justkannada.in): ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಪೋಟ ಹಿನ್ನೆಲೆ ಅಲ್ಲಿನ ಸರ್ಕಾರ ಸಬುರ್ಖಾ ನಿಷೇಧ ಮಾಡಿದ್ದು ಹೀಗಾಗಿ ಅಲ್ಲಿಯಂತೆಯೇ ನಮ್ಮ ದೇಶದಲ್ಲೂ ಬುರ್ಖಾ ನಿಷೇಧ ಮಾಡುವಂತೆ ಶಿವಸೇನೆ ಆಗ್ರಹಿಸಿದೆ.

ಈ ಬಗ್ಗೆ ಮಾತನಾಡಿರುವ ಶೀವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ, ಭಾರತ ದೇಶ ಮತ್ತೊಂದು ಶ್ರೀಲಾಂಕ ಆಗೋದು ಬೇಡ. ದೇಶದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಬ್ಯಾನ್ ಆಗಲಿ. ಆನಾಹುತ ನಡೆಯುವ ಮೊದಲು ದೇಶದಲ್ಲಿ ಬುರ್ಖಾ ಬ್ಯಾನ್ ಆಗಲಿ ಎಂದು ಒತ್ತಾಯಿಸಿದ್ದಾರೆ.

ತ್ತೀಚೆಗೆ ಶ್ರೀಲಂಕಾದ ಕೊಲಂಬೋದಲ್ಲಿ ಚರ್ಚ್‌ಗಳು, ಹೋಟೆಲ್‌ಗಳ ಮಲೆ ನಡೆದ ಆತ್ಮಾಹುತಿ ದಾಳಿ ನಂತರ ಎಚ್ಚೆತ್ತುಕೊಂಡಿರುವ ಲಂಕಾ ಸರ್ಕಾರ ಬುರ್ಖಾ ನಿಷೇಧಿಸಿದೆ. ಬುರ್ಖಾ ಜೊತೆಗೆ ಮುಖವನ್ನು ಮುಚ್ಚಿಕೊಳ್ಳುವಂತೆ ಬಟ್ಟೆ ಸುತ್ತಿಕೊಳ್ಳುವುದನ್ನು ಕೂಡ ನಿಷೇಧಿಸಿದೆ. ಭಯೋತ್ಪಾದಕ ಕೃತ್ಯಗಳ ನಿಯಂತ್ರಣಕ್ಕಾಗಿ ಈ ಕ್ರಮ ಕೈಗೊಂಡಿದೆ.

Shivsena demands ban on burkha in the country