Monday, September 14, 2026

BDA Apartments

ಸ್ವಪಕ್ಷದಲ್ಲೇ ಸಿಎಂ ಬದಲಾವಣೆ ಬಗ್ಗೆ ಚರ್ಚೆ: ಸಚಿವರ ವಿರುದ್ದ ಸಿಎಂ ಸಿದ್ಧರಾ...
Home Front Page ಸ್ವಪಕ್ಷದಲ್ಲೇ ಸಿಎಂ ಬದಲಾವಣೆ ಬಗ್ಗೆ ಚರ್ಚೆ: ಸಚಿವರ ವಿರುದ್ದ ಸಿಎಂ ಸಿದ್ಧರಾಮಯ್ಯ ಗರಂ

ಸ್ವಪಕ್ಷದಲ್ಲೇ ಸಿಎಂ ಬದಲಾವಣೆ ಬಗ್ಗೆ ಚರ್ಚೆ: ಸಚಿವರ ವಿರುದ್ದ ಸಿಎಂ ಸಿದ್ಧರಾಮಯ್ಯ ಗರಂ

ಬೆಂಗಳೂರು,ಅಕ್ಟೋಬರ್,10,2024 (www.justkannada.in): ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ಬಂದಿದ್ದು ಈ ಮಧ್ಯೆ ಸ್ವಪಕ್ಷದಲ್ಲೇ ಈ ಬಗ್ಗೆ ಚರ್ಚೆ ನಡೆಯುತ್ತಿರುವುದಕ್ಕೆ ಸಚಿವರ ವಿರುದ್ದ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ ಎನ್ನಲಾಗಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಬದಲಾವಣೆ ಬಗ್ಗೆ ವಿಪಕ್ಷದವರಿಗಿಂತ  ಸ್ವಪಕ್ಷದವರಿಂದಲೇ ಚರ್ಚೆಯಾಗುತ್ತಿದೆ  ಯಾರ್ಯರು ಎಲ್ಲೆಲ್ಲಿ ಮಾತಾಡಿದ್ದೀರಿ ಎಂದು ಗೊತ್ತು. ನವೆಂಬರ್ ಗೆ ಸಿಎಂ ಇಳಿಯುತ್ತಾರೆ ಅಂತಾ ಸ್ವಪಕ್ಷದವರೇ  ಚರ್ಚೆ ಮಾಡ್ತಿದ್ದೀರಿ.  ಯಾರ್ಯಾರು ಎಲ್ಲೆಲ್ಲಿ ಮಾತಾನಾಡಿದ್ದೀರಾ  ಎಲ್ಲಾ ಮಾಹಿತಿ ಕೂಡ ಇದೆ.  ಯಾವ ಯಾವ ಶಾಸಕರು ಎಲ್ಲೆಲ್ಲಿ ಚರ್ಚೆ ಮಾಡಿದ್ದೀರಿ ಎಂದು ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಹಾಗೆಯೇ  ಇದೆಲ್ಲಾ ಬಿಟ್ಟು  ಸರ್ಕಾರದ ಮತ್ತು ಜನರ ಕೆಲಸ ಮಾಡುವ ಕಡೆಗೆ ಗಮನ ಕೊಡಿ ಎಂದು  ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಖಡಕ್ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ.

Key words: CM change, discussion, CM Siddaramaiah, Minister