ಸಂಡೇ ಲಾಕ್’ಡೌನ್ ಕುರಿತು ಸ್ಪಷ್ಟನೆ ನೀಡದ ಸಿಎಂ ಬಿಎಸ್ವೈ

ಬೆಂಗಳೂರು, ಜುಲೈ 21, 2020 (www.justkannada.in): ರಾಜ್ಯದಲ್ಲಿ ನಾಳೆಯಿಂದ ಲಾಕ್ ಡೌನ್ ಇರುವುದಿಲ್ಲ ಎಂದು ಘೋಷಿಸಿದ ಬೆನ್ನಲ್ಲೆ ಸಂಡೇ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಇರುತ್ತಾ? ಅಥವಾ ಇಲ್ಲವೇ ? ಎಂಬ ಗೊಂದಲ ಆರಂಭವಾಗಿದೆ.

ಇಂದು ಫೇಸ್’ಬುಕ್ ಹಾಗೂ ಯೂ ಟ್ಯೂಬ್ ನಲ್ಲಿ ಮಾತನಾಡಿದ ಯಡಿಯೂರಪ್ಪ ಈ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ನಾಳೆಯಿಂದ ಕಂಟೈನ್ ಮೆಂಟ್ ವಲಯಗಳನ್ನು ಹೊರತು ಪಡಿಸಿ ಮತ್ತೆಲ್ಲ ಕಡೆ ಲಾಕ್ ಡೌನ್ ಇರುವುದಿಲ್ಲ ಎಂದು ಘೋಷನೆ ಮಾಡಿದರು.

ಆದರೆ ಸಂಡೇ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಕುರಿತು ಉಲ್ಲೇಖ ಮಾಡಿಲ್ಲ. ಹೀಗಾಗಿ ಮತ್ತೆ ಜನರಲ್ಲಿ ಲಾಕ್ ಡೌನ್ ಕುರಿತು ಗೊಂದಲ ಆರಂಭವಾಗಿದೆ. ಈ ಕುರಿತು ರಾಜ್ಯ ಸರಕಾರ ಸ್ಪಷ್ಟನೆ ನೀಡಬೇಕಿದೆ.