ಸಂಕಷ್ಟದ ಸಮಯದಲ್ಲಿ ಟೀಕೆ ಬದಲು ಸಲಹೆ-ಸೂಚನೆ ನೀಡಿ: ಪ್ರತಿಪಕ್ಷ ನಾಯಕರಿಗೆ ಬಿಎಸ್ವೈ ಮನವಿ

ಬೆಂಗಳೂರು, ಜುಲೈ 21, 2020 (www.justkannada.in): ಕೋವಿಡ್ ಸಂಕಷ್ಟದ ಸಮಯದಲ್ಲಿ ಪ್ರತಿ ಪಕ್ಷದ ಸದಸ್ಯರು ಟೀಕೆ ಟಿಪ್ಪಣಿ ಮಾಡುವ ಬದಲು ಕ್ರಿಯಾತ್ಮಕ ಸಲಹೆ, ಸೂಚನೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ಫೇಸ್’ಬುಕ್ ಲೈವ್’ನಲ್ಲಿ ಮಾತನಾಡಿದ ಅವರು, ಸಂಕಷ್ಟದ ಸಮಯದಲ್ಲಿ ಟೀಕೆ ಟಿಪ್ಪಣಿ ಮಾಡುವುದು ಸರಿಯಲ್ಲ. ಜನ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಕೊರೊನಾ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ಯಾವುದೇ ಅಕ್ರಮಕ್ಕೆ ಅವಕಾಶ ನೀಡಿಲ್ಲ. ಈ ಸಂಬಂಧ ಯಾವುದೇ ಮಾಹಿತಿ ಬೇಕಿದ್ದರೆ ಕೇಳಿ ನೀಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.

ಇಂತಹ ಸಂಕಷ್ಟ ಸಮಯದಲ್ಲಿ ರಾಜಕೀಯ ಮಾಡುವುದನ್ನು ಬಿಟ್ಟು ರಾಜ್ಯ ಜನರಿಗಾಗಿ ಒಗ್ಗಟ್ಟಾಗಿ ಕೆಲಸ ಮಾಡೋಣ. ಈ ಮೂಲಕ ಸಂಕಷ್ಟದಿಂದ ಹೊರ ಬರಲು ಅನುಕೂಲವಾಗುತ್ತದೆ. ಪ್ರತಿ ಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲ ಪ್ರತಿಪಕ್ಷ ನಾಯಕರು ಕ್ರಿಯಾತ್ಮಕ ಸರಕಾರಕ್ಕೆ ಕ್ರೀಯಾತ್ಮಕ ಸಲಹೆಗಳನ್ನು ನೀಡುವಂತೆ ಕೋರಿದರು.