Friday, September 11, 2026

BDA Apartments

Home Front Page ಸಿಎಂ ಬಿಎಸ್ ವೈ ದೆಹಲಿ ಭೇಟಿ ವಿಚಾರ: ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ….

ಸಿಎಂ ಬಿಎಸ್ ವೈ ದೆಹಲಿ ಭೇಟಿ ವಿಚಾರ: ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ….

ಕೊಪ್ಪಳ,ಸೆಪ್ಟಂಬರ್,17,2020(www.justkannada.in):  ರಾಜ್ಯ ಸಚಿವಕಾಂಕ್ಷಿಗಳಿಗೆ ಸಿಎಂ ಬಿಎಸ್ ಯಡಿಯೂರಪ್ಪ ಸಿಹಿಸುದ್ದಿ ನೀಡಿದ್ದು ಸಚಿವ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲು ದೆಹಲಿಗೆ ತೆರಳುತ್ತಿದ್ದಾರೆ. ಈ ನಡುವೆ ಸಿಎಂ ಬಿಎಸ್ ಯಡಿಯೂರಪ್ಪ ಅವರ ದೆಹಲಿ ಭೇಟಿ ಕುರಿತು ಕೃಷಿ ಸಚಿವ ಬಿ.ಸಿ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.jk-logo-justkannada-logo

ಕೊಪ್ಪಳದಲ್ಲಿ ಇಂದು ಮಾತನಾಡಿರುವ ಸಚಿವ ಬಿ.ಸಿ ಪಾಟೀಲ್, ಸರ್ಕಾರದ ಕೆಲಸಕ್ಕಾಗಿ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಹೋಗುತ್ತಿದ್ದಾರೆ. ಹೀಗಾಗಿ ಸಿಎಂ ದೆಹಲಿ ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ್ದಾರೆ. cm-bs-yeddyurappa-visits-delhi-minister-bc-patil

ಇನ್ನು ರಾಜ್ಯದಲ್ಲಿ  ಮುಖ್ಯಮಂತ್ರಿ ಬದಲಾವಣೆ ವಿಚಾರ ಸದ್ಧು ಮಾಡುತ್ತಿರುವ ಹಿನ್ನೆಲೆ ಈಬಗ್ಗೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ರಾಜ್ಯದ ಸಿಎಂ ಬದಲಾವಣೆ  ಪ್ರಸ್ತಾವನೆಯೇ ಇಲ್ಲ. ಬಿಎಸ್ ಯಡಿಯೂರಪ್ಪ ಅವರೇ ಮುಂದಿನ ಮೂರು ವರ್ಷಗಳಲ್ಲೂ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದಿರು. ಸಚಿವ ಜಗದೀಶ್ ಶೆಟ್ಟರ್ ರಾಜ್ಯಪಾಲರನ್ನ ಭೇಟಿಯಾಗಿರುವುದು ಸಹಜವಷ್ಟೆ ಎಂದರು.

Key words: CM BS Yeddyurappa- Visits- Delhi- Minister – BC Patil