ಪುತ್ರನ ಕ್ಷೇತ್ರದ ಅಭಿವೃದ್ದಿ ವಿಷಯಕ್ಕೆ ಪ್ರತ್ಯೇಕ ಅಧಿಕಾರಿ ಮೀಸಲಿಟ್ಟ ಸಿಎಂ ಬಿಎಸ್ ವೈ….

ಬೆಂಗಳೂರು,ಅ,18,2019(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯ ಅಭಿವೃದ್ದಿ ವಿಷಯಕ್ಕೆ ಪ್ರತ್ಯೇಕ ಅಧಿಕಾರಿಯನ್ನ ನೇಮಿಸುವ ಮೂಲಕ ತವರು ಪ್ರೇಮ ಮೆರೆದಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಸಚಿವಾಲಯದ ಅಧಿಕಾರಿಗಳಿಗೆ ಜವಾಬ್ದಾರಿ ಮರುಹಂಚಿಕೆ ಮಾಡಿದ್ದಾರೆ. ಸಿಎಂ ಆದ ಬಳಿಕ ಬಿಎಸ್ ವೈ  ಮೂರನೇ ಬಾರಿ ಸಚಿವಾಲಯದ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿದ್ದು, ಈ ವೇಳೆ ಶಿವಮೊಗ್ಗ ಕ್ಷೇತ್ರದ ಅಭಿವೃದ್ಧಿ  ಹೊಣೆಯನ್ನ ಸಿಎಂ ಜಂಟಿ ಕಾರ್ಯದರ್ಶಿ  ಎಂ.ಕೆ ರಂಗಯ್ಯ ಅವರಿಗೆ ವಹಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನು ಶಿವಮೊಗ್ಗ ಬಿಟ್ಟು ಉಳಿದ ಎಲ್ಲಾ ಸಂಸದರ ಕ್ಷೇತ್ರ, ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಹೊಣೆಯನ್ನ ಓರ್ವ ಅಧಿಕಾರಿಗೆ ನೀಡಿದ್ದಾರೆ. ಸಚಿವಾಲಯದ ಉಪ ಕಾರ್ಯದರ್ಶಿ ಎ.ಎಸ್ ರವಿ ಅವರಿಗೆ ಶಿವಮೊಗ್ಗ ಬಿಟ್ಟು ಉಳಿದ ಕ್ಷೇತ್ರಗಳ ಅಭಿವೃದ್ಧಿ ಜವಾಬ್ದಾರಿಯನ್ನ ವಹಿಸಿದ್ದಾರೆ.

ಈ ಮೂಲಕ ಎಲ್ಲಾ ಸಂಸದರು ಶಾಸಕರ ಕ್ಷೇತ್ರಗಳಿಗೆ ಓರ್ವ ಅಧಿಕಾರಿ, ತಮ್ಮ ಪುತ್ರನ ಕ್ಷೇತ್ರಕ್ಕೆ ಪ್ರತ್ಯೇಕ ಅಧಿಕಾರಿಯನ್ನ ಮೀಸಲಿಟ್ಟು ಸಿಎಂ ಬಿಎಸ್ ವೈ, ತವರು ಪ್ರೇಮ ತೋರಿಸಿದ್ದಾರೆ

Key words: CM BS Yeddyurappa- separate officer- – development – shivamogga