ಸಿಎಂ ನಿವಾಸದ ಆರು ಸಿಬ್ಬಂದಿಗೆ ಕೊರೋನಾ ಸೋಂಕು ಪತ್ತೆ…

ಬೆಂಗಳೂರು,ಆ,3,2020(www.justkannada.in): ಮುಖ್ಯಮಂತ್ರಿ ಬಿಎಸ್  ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ದೃಢವಾದ ಬೆನ್ನಲ್ಲೆ ಇದೀಗ ಆತಂಕ ಹೆಚ್ಚಾಗಿದ್ದು ಸಿಎಂ ನಿವಾಸದ 6 ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.jk-logo-justkannada-logo

ಸಿಎಂ ಬಿಎಸ್ ವೈಗೆ ಕೊರೋನಾ ಸೋಂಕು ತಗುಲಿ ಈಗಾಗಲೇ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಸಿಎಂ ನಿವಾಸದ ಅಡುಗೆ ಮಾಡುವವರು, ಮನೆ ಕೆಲಸ ಮಾಡುವ ಮಹಿಳೆ, ಸಿಎಂ ವಿಶೇಷ ಕರ್ತವ್ಯಾಧಿಕಾರಿ,  ಕಾರ್ ಡ್ರೈವರ್ ಸೇರಿ 6 ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ ಎನ್ನಲಾಗಿದೆ.cm-bs-yeddyurappa-residence-six-staff-members-coronavirus

ಸಿಎಂ ಬಿಎಸ್ ಯಡಿಯೂರಪ್ಪಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಸಿಎಂ ನಿವಾಸದ ಸಿಬ್ಬಂದಿಗೆ ಕೊರೋನಾ ಟೆಸ್ಟ್ ಮಾಡಲಾಗುತ್ತಿದೆ. ಇದೀಗ 6 ಸಿಬ್ಬಂದಿಗೆ ಕೊರೋನಾ ಸೋಂಕು ದೃಢವಾಗಿದ್ದು ಅವರನ್ನ ಅಧಿಕಾರಿಗಳು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ.

Key words: CM BS Yeddyurappa- residence- Six -staff –members- coronavirus.