ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಕುರಿತು ವರದಿ ಪಡೆದ ಸಿಎಂ ಬಿಎಸ್ ವೈ: ಪೊಲೀಸ್ ಇಲಾಖೆ ಮೇಲೆ ಗರಂ…

ಬೆಂಗಳೂರು,ಆ,11,2020(www.justkannada.in): ನಿನ್ನೆ ರಾತ್ರಿ  ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಗಲಭೆ  ಕುರಿತು ವರದಿ ಪಡೆದ ಸಿಎಂ ಬಿಎಸ್ ಯಡಿಯೂರಪ್ಪ, ಪೊಲೀಸ್ ಇಲಾಖೆ ಮೇಲೆ ಗರಂ ಆಗಿದ್ದಾರೆ.jk-logo-justkannada-logo

ಗಲಭೆಗೆ ಕಾರಣ, ಕಾರಣಕರ್ತರು, ಕೈಗೊಂಡ ಭದ್ರತೆ, ಕಾನೂನು ಸುವ್ಯವಸ್ಥೆ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್  ಬಳಿಯಿಂದ ವರದಿ ತರಿಸಿಕೊಂಡ ಸಿಎಂ ಬಿಎಸ್ ಯಡಿಯೂರಪ್ಪ ಪೊಲೀಸರನ್ನ ತರಾಟೆ ತೆಗೆದುಕೊಂಡರು. ಗಲಭೆ ತುಂಬಾ ಹೊತ್ತು ನಡೆಯಲು ಬಿಟ್ಟು ಏನ್ಮಾಡ್ತಿದ್ರಿ ಎಂದು ಕ್ಲಾಸ್ ತೆಗೆದುಕೊಂಡರು.

ಸಾರ್ವಜನಿಕರ ವಾಹನಗಳು, ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ. ಕಿಡಿಗೇಡಿಗಳ ದಾಂಧಲೆಯನ್ನು ಆರಂಭದಲ್ಲೇ ಯಾಕೆ ತಡೆಯಲಿಲ್ಲ. ಇದು ಪೂರ್ವನಿಯೋಜಿತ ಕೃತ್ಯವಾದರೂ ಮೊದಲೇ ಯಾಕೆ ಪೊಲೀಸ್ ಇಲಾಖೆಗೆ ಗೊತ್ತಾಗಲಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಪೊಲೀಸ್ ಇಲಾಖೆ ಮೇಲೆ ಸಿಟ್ಟಾದರು.cm-bs-yeddyurappa-reports-dj-halli-riots-outrage-police-department

ಹಾಗೆಯೇ ಗಲಭೆಗೆ ಕಾರಣರಾದ  ಕಿಡಿಗೇಡಿಗಳ ಶೀಘ್ರ ಪತ್ತೆ ಮತ್ತು ಕಾನೂನು ಕ್ರಮಕ್ಕೆ ಖಡಕ್ ಸೂಚನೆ‌ ನೀಡಿದರು.

Key words: CM BS Yeddyurappa- reports – DJ  halli-riots-outrage- Police Department.