ಮತ್ತೆ ಖಾತೆ ಬದಲಾವಣೆಗೆ ಸಿಎಂ ಬಿಎಸ್ ವೈ ನಿರ್ಧಾರ: ಸಚಿವ ಸುಧಾಕರ್ ಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆ.

ಬೆಂಗಳೂರು,ಜನವರಿ,25,2021(www.justkannada.in):  ಈಗಾಗಲೇ ಎರಡು ಬಾರಿ ಖಾತೆ ಬದಲಾವಣೆ ಮಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ಇದೀಗ ಸಚಿವ ಅಸಮಾಧಾನ ನಿವಾರಿಸಲು ಮತ್ತೆ ಖಾತೆ ಅದಲು ಬದಲು ಮಾಡಲು ನಿರ್ಧಾರ ಮಾಡಿದ್ದಾರೆ. jk

ಕೋವಿಡ್ ನಿಯಂತ್ರಣದ ಸಲುವಾಗಿ ಸಚಿವ ಡಾ.ಕೆ.ಸುಧಾಕರ್ ಅವರಿಂದ ಹಿಂಪಡೆದು, ಸಚಿವ ಮಾಧುಸ್ವಾಮಿಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಮತ್ತೆ ಸುಧಾಕರ್ ಅವರಿಗೆ ವಾಪಸ್  ನೀಡಿದ್ದಾರೆ. ಈ ಮೂಲಕ ಸಚಿವ ಸುಧಾಕರ್ ಹೆಗಲಿಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಗಳ ಜವಾಬ್ದಾರಿ ಹೊರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.CM BS yeddyurappa- decision - change -department

ಹಾಗೆಯೇ ಸಚಿವ  ಆನಂದ್ ಸಿಂಗ್ ಬಳಿ ಇದ್ದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನ ವಾಪಸ್ ಪಡೆದು ಮೂಲ ಸೌಕರ್ಯ ಖಾತೆ ಜೊತೆಗೆ ಹಜ್ ಮತ್ತು ವಕ್ಫ್ ಖಾತೆಯನ್ನ ಆನಂದ್ ಸಿಂಗ್ ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.  ಈ ಮೂಲಕ ಡಾ.ಕೆ.ಸುಧಾಕರ್ ಹಾಗೂ ಆನಂದ್ ಸಿಂಗ್ ಖಾತೆಗಳನ್ನು ಬದಲಾವಣೆ ಮಾಡಲಾಗಿದೆ. ಇನ್ನು ಹಜ್ ಮತ್ತು ವಕ್ಫ್ ಖಾತೆಗೆ ಸಚಿವ ಆನಂದ್ ಸಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ.

Key words: CM BS yeddyurappa- decision – change -department