Sunday, August 30, 2026

BDA Apartments

Home Front Page ಈಗ ನೆರೆ ಪರಿಹಾರ ಹಣವನ್ನ ಹೆಚ್ಚು ಮಾಡುವ ಶಕ್ತಿ ರಾಜ್ಯ ಸರ್ಕಾರಕ್ಕಿಲ್ಲ- ಮೈಸೂರಿನಲ್ಲಿ ಸಿಎಂ ಬಿಎಸ್...

ಈಗ ನೆರೆ ಪರಿಹಾರ ಹಣವನ್ನ ಹೆಚ್ಚು ಮಾಡುವ ಶಕ್ತಿ ರಾಜ್ಯ ಸರ್ಕಾರಕ್ಕಿಲ್ಲ- ಮೈಸೂರಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ..

ಮೈಸೂರು,ಅ,7,2019(www.justkannada.in): ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪ್ರವಾದಿಂದ ಹಾನಿಯಾಗಿದೆ. ಹೀಗಾಗಿ ಈಗ ನೆರೆ ಪರಿಹಾರ ಹಣ ಹೆಚ್ಚು ಮಾಡುವ ಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ನಾಳೆಯ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಗೆ ಚಾಲನೆ ನೀಡುವ ಸಲುವಾಗಿ ಇಂದು ಸಂಜೆ ಸಿಎಂ ಬಿಎಸ್ ಯಡಿಯೂರಪ್ಪ ಮೈಸೂರಿಗೆ ಆಗಮಿಸಿದರು. ಈ ವೇಳೆ ಮಾತನಾಡಿದ ಸಿಎ ಬಿಎಸ್ ವೈ, ಅಪಾರ ಪ್ರಮಾಣದ ಪ್ರವಾಹ ಹಾನಿ ಸಂಭವಿಸಿದ್ದು ಹೀಗಾಗಿ ರಾಜ್ಯ ಸರ್ಕಾರಕ್ಕೆ ಈಗ ಪರಿಹಾರ ಹಣ ಹೆಚ್ಚು ಮಾಡುವ ಶಕ್ತಿ ಇಲ್ಲ. ಮುಂದಿನ ಬಜೆಟ್ ನಲ್ಲಿ ನೋಡೋಣ ಎಂದರು.

ಹಾಗೆಯೇ ಕೇಂದ್ರ ಸರ್ಕಾರದಿಂದ ಮೊದಲ ಕಂತಿನ ಪರಿಹಾರದ ಹಣ ಬಂದಿದೆ. ಇದನ್ನ ಬೆಳೆನಾಶ ಮನೆ ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಇನ್ನು ಹೆಚ್ಚಿನ ಪರಿಹಾರವನ್ನ ಬಿಡುಗಡೆ ಮಾಡಲಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

Key words: CM BS Yeddyurappa – come-Mysore- dasara- jamboo savari