ನಾಲ್ವರು ಸಚಿವರ ಖಾತೆ ಬದಲಾವಣೆ ಮಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ…

ಬೆಂಗಳೂರು ,ಫೆ,11,2020(www.justknnada.iun): ನೂತನ 10 ಸಚಿವರಿಗೆ ಖಾತೆ ಹಂಚಿಕೆ ಮಾಡಿ ಒಂದು ದಿನದಲ್ಲೇ ಸಿಎಂ ಬಿಎಸ್ ಯಡಿಯೂರಪ್ಪ ನಾಲ್ವರು ಸಚಿವರಿಗೆ ಖಾತೆ ಬದಲಾವಣೆ ಮಾಡಿದ್ದಾರೆ.

ನಿನ್ನೆಯಷ್ಟೆ ನೂತನ 10 ಸಚಿವರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದರು. ಆದರೆ ಕೆಲ ಸಚಿವರು ತಾವು ನಿರೀಕ್ಷಿಸಿದ್ದ ಖಾತೆ ಸಿಗದ ಹಿನ್ನೆಲೆ ಬೇಸರ ವ್ಯಕ್ತಪಡಿಸಿದ್ದರು. ನಮ್ಮ ನಿರೀಕ್ಷೆಯೇ ಬೇರೆಯಾಗಿತ್ತು, ಕೊಟ್ಟ  ಖಾತೆ ಬೇರೆ ಎಂಬುದಾಗಿ ಅಸಮಾಧಾನ ಹೊರ ಹಾಕಿದ್ದರು. ಹೀಗಾಗಿ ಇಂದು ಮತ್ತೆ ಸಿಎಂ ಬಿಎಸ್ ಯಡಿಯೂರಪ್ಪ ನಾಲ್ವರು ಸಚಿವರ ಖಾತೆಯನ್ನು ಬದಲಾವಣೆ ಮಾಡಿದ್ದಾರೆ.

ಸಚಿವ ಆನಂದ್ ಸಿಂಗ್ ಗೆ ನೀಡಲಾಗಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯನ್ನ ಇದೀಗ ಗೋಪಾಲಯ್ಯ ಅವರಿಗೆ ನೀಡಲಾಗಿದೆ.  ಸಚಿವ ಆನಂದ್ ಸಿಂಗ್ ಗೆ ಅರಣ್ಯ ಮತ್ತು ಜೈವಿಕ ಪರಿಸರ ಖಾತೆ ಹಂಚಿಕೆ ಮಾಡಲಾಗಿದೆ. ಬಿಸಿ ಪಾಟೀಲ್ ಗೆ ನಿನ್ನೆ ಅರಣ್ಯ ಖಾತೆ ನೀಡಲಾಗಿತ್ತು. ಆದರೆ ಬಿ.ಸಿ ಪಾಟೀಲ್ ಅಸಮಾಧಾನ ಹೊರ ಹಾಕಿದ ಹಿನ್ನೆಲೆ ಇದೀಗ ಬಿ.ಸಿ ಪಾಟೀಲ್ ಅವರಿಗೆ ಕೃಷಿ ಖಾತೆಯನ್ನ ನೀಡಿದ್ದಾರೆ.

ಖಾತೆ ಬದಲಾವಣೆ ಪಟ್ಟಿ ಹೀಗಿದೆ.

ಆನಂದ್ ಸಿಂಗ್ – ಅರಣ್ಯ ಮತ್ತು ಜೈವಿಕ ಪರಿಸರ ಖಾತೆ

ಬಿ.ಸಿ ಪಾಟೀಲ್- ಕೃಷಿಖಾತೆ.

ಗೋಪಾಲಯ್ಯ – ಆಹಾರ ಮತ್ತು ನಾಗರೀಕ ಸರಬರಾಜು ಖಾತೆ

ಶಿವರಾಂ ಹೆಬ್ಬಾರ್ – ಕಾರ್ಮಿಕ ಇಲಾಖೆ ಜತೆಗೆ ಸಕ್ಕರೆ ಖಾತೆ

ಶ್ರೀಮಂತ ಪಾಟೀಲ್- ಜವಳಿ ಖಾತೆ ಜತೆಗೆ ಅಲ್ಪಸಂಖ್ಯಾತ ಇಲಾಖೆ.

ಇನ್ನು ಇಂಧನ ಖಾತೆಗೆ ಸಚಿವ ಆನಂದ್ ಸಿಂಗ್ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. ಆದರೆ ಸಿಎಂ ಬಿಎಸ್ ಯಡಿಯೂರಪ್ಪ ಇಂಧನ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

Key words: CM BS Yeddyurappa-changed –department-four ministers.