ಬಿಜೆಪಿ ಪರ ನಟ ಸುದೀಪ್ ಪ್ರಚಾರ ಕುರಿತು ಟೀಕಿಸಿದ್ಧ ಹೆಚ್.ಡಿ ಕುಮಾರಸ್ವಾಮಿಗೆ ಸಿಎಂ ಬೊಮ್ಮಾಯಿ ಟಾಂಗ್.

ಹುಬ್ಬಳ್ಳಿ,ಏಪ್ರಿಲ್,7,2023(www.justkannada.in): ಬಿಜೆಪಿ ಪರ ನಟ ಸುದೀಪ್ ಪ್ರಚಾರ ಕುರಿತು ಟೀಕಿಸಿದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹೆಚ್.ಡಿಕೆ ಯಾವ ಸ್ಟಾರ್ ನಟರನ್ನೂ ನಿಲ್ಲಿಸಿಲ್ವಾ..?  ರಾಮನಗರ ಬೈಎಲೆಕ್ಷನ್ ನಲ್ಲಿ ಅಂಬರೀಶ್ ಕರೆದುಕೊಂಡು ಬಂದು ಪ್ರಚಾರ ಮಾಡಿಲ್ವಾ..?  ನಟರು ರಾಜಕೀಯ ಪಕ್ಷಕ್ಕೆ ಬೆಂಬಲ ಕೊಡುವುದು ಹೊಸದೇನಲ್ಲ. ಸುದೀಪ್ ನಮ್ಮ ಪರ ಪ್ರಚಾರಕ್ಕೆ ಬಂದರೇ  ಇವರಿಗ್ಯಾಕೆ ತಳಮಳ. ಹೆಚ್.ಡಿಕೆ  ಆತಂಕ. ಹೀಗಾಗಿ ಟೀಕೆ ಮಾಡುತ್ತಿದ್ದಾರೆ.  ಕುಮಾರಸ್ವಾಮಿ ಅವರ ಸೋಲನ್ನ ನೋಡಿದ್ದಾರೆ  ಎಚ್ ಡಿಕೆಗೆ ಸೋಲುವ ಭಯವಿದೆ ಎಂದು ಲೇವಡಿ ಮಾಡಿದರು.

ಮಾಜಿ ಸಿಎಂ ಸಿದ‍್ಧರಾಮಯ್ಯ ವಿರುದ್ಧ ಸಚಿವ ಸೋಮಣ್ಣ ಸ್ಪರ್ಧೆ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ನಾಳೆ ವರುಣಾ ಕ್ಷೇತ್ರದ ಬಗ್ಗೆಯೂ ಚರ್ಚೆಯಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

Key words: CM Bommai -Tong -HD Kumaraswamy -BJP actor –Sudeep- campaign.