ರಸ್ತೆ ಗುಂಡಿ ಮುಚ್ಚಿ ಮೈಸೂರು ಮಾನ ಉಳಿಸಿ: ಕಾಂಗ್ರೆಸ್ ಪಾಲಿಕೆ ಸದಸ್ಯರಿಂದ ಪ್ರತಿಭಟನೆ.

ಮೈಸೂರು,ಮೇ,20,2022(www.justkannada.in): ನಗರದಲ್ಲಿ ರಸ್ತೆ ಗುಂಡಿಗಳನ್ನ ಮುಚ್ಚಿಸುವಂತೆ ಒತ್ತಾಯಿಸಿ ಮೈಸೂರು ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು.

ಪಾಲಿಕೆ ಮೇಯರ್ ಕೊಠಡಿ ಮುಂದೆ ಪಾಲಿಕೆ ಸದಸ್ಯ ಅಯೂಬ್ ಖಾನ್ ನೇತೃತ್ವದಲ್ಲಿ  ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು , ರಸ್ತೆ ಗುಂಡಿ ಮುಚ್ಚಿ ಮೈಸೂರು ಮಾನ ಉಳಿಸಿ ಎಂದು ಘೋಷಣೆ ಕೂಗಿದರು. ಅಲ್ಲದೆ  ನಗರದಲ್ಲಿ ಸರಿಯಾಗಿ ಕಸ ವಿಲೇವಾರಿ ಆಗ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯರ ಬಗ್ಗೆ ಸಂಸದ ಪ್ರತಾಪ್ ಸಿಂಹ ಹೇಳಿಕೆಗೂ ಖಂಡನೆ ವ್ಯಕ್ತಪಡಿಸಿದ ಪ್ರತಿಭಟನಾಕಾರರು  ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಧಿಕ್ಕಾರ ಕೂಗಿದ  ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಏರಿಯಾದಲ್ಲಿ ಸಮಸ್ಯೆ ಇದ್ರೆ ಆಯಾ ಪಾಲಿಕೆ ಸದಸ್ಯರ ಮನೆ ಮುಂದೆ ಧರಣಿ ಮಾಡಿ. ಪಾಲಿಕೆ ಸದಸ್ಯರ ಕುತ್ತಿಗೆ ಪಟ್ಟಿ ಹಿಡಿದು ಕೆಲಸ ಮಾಡಿ ಅಂತಾ ಕೇಳಿ. ಯಾವಾಗ ಕಾರ್ಪೊರೇಟರ್ ಗಳ ಕುತ್ತಿಗೆ ಪಟ್ಟಿ ಹೀಡಿತೀರಾ ಆಗಷ್ಟೇ ನಿಮ್ಮ ಕೆಲಸ ಆಗುತ್ತೆ ಎಂದು ಮೈಸೂರು ಜನತೆಗೆ ಸಂಸದ ಪ್ರತಾಪ್ ಸಿಂಹ  ಹೇಳಿದ್ದರು.

Key words: Close -road –Mysore-Protest – Congress.