ಮೈಸೂರು,ಜುಲೈ,17,2025 (www.justkannada.in): ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮೈಸೂರಿಗೆ 3 ನೇ ಸ್ಥಾನ ಹಿನ್ನೆಲೆಯಲ್ಲಿ ಮೈಸೂರಿನ ಪೌರ ಕಾರ್ಮಿಕರು ಸಿಹಿ ಹಂಚಿ ಸಂಭ್ರಮಿಸಿದರು.
ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಪಾಲಿಕೆಯತ್ತ ಜಮಯಿಸಿದ ಪೌರ ಕಾರ್ಮಿಕರು ಒಬ್ಬರಿಗೊಬ್ಬರು ಸಿಹಿ ಹಂಚಿ ಸಂಭ್ರಮಿಸಿದರು. ನಿದ್ರೆ, ಊಟ ಇಲ್ಲದೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದೆವು. ನಮ್ಮ ಪ್ರಯತ್ನಕ್ಕೆ 3 ನೇ ಸ್ಥಾನ ದೊರೆತಿರುವುದು ಸಂತಸ ತಂದಿದೆ. ಮೊದಲನೇ ಸ್ಥಾನ ಪಡೆಯಬೇಕು ಎನ್ನುವ ಆಸೆ ಇತ್ತು. ಆದರೆ ಮೂರನೇ ಸ್ಥಾನ ದೊರೆತಿದೆ.
ನಮ್ಮ ಗುರಿ ಮೈಸೂರನ್ನು ಮೊದಲ ಸ್ಥಾನದಲ್ಲಿ ನೋಡುವ ಕನಸಿದೆ. ಮುಂದೆ ಅಧಿಕಾರಿಗಳ ಸಹಕಾರದಿಂದ ಮೊದಲ ಸ್ಥಾನಕ್ಕೆ ಶ್ರಮಿಸುತ್ತೇವೆ.ಸರ್ಕಾರ ಮತ್ತಷ್ಟು ಪೌರ ಕಾರ್ಮಿಕರನ್ನು ನೇಮಕ ಮಾಡಬೇಕಿದೆ. ಸೌಲಭ್ಯಗಳನ್ನು ಒದಗಿಸಿದರೆ ಮುಂದೆ ಹುಮ್ಮಸ್ಸಿನಿಂದ ಕೆಲಸ ನಿರ್ವಹಿಸುತ್ತೇವೆ. ನಮ್ಮ ಬೇಡಿಕೆಗಳ ಕಡೆ ಅಧಿಕಾರಿಗಳು ಗಮನ ವಹಿಸಿದರೆ ಮತ್ತಷ್ಟು ಬಲ ಬರತ್ತದೆ ಎಂದು ಪೌರ ಕಾರ್ಮಿಕರು ತಿಳಿಸಿದರು.
Key words: cleanest cities, Mysore, 3rd Place, Civil workers, celebrate