‘ಕೋಲುಮಂಡೆ’ ಹಾಡು ವಿವಾದ: ಚಂದನ್ ಶೆಟ್ಟಿ ಕ್ಷಮೆಯಾಚನೆ…

Promotion

ಬೆಂಗಳೂರು, ಆಗಸ್ಟ್, 25, 2020(www.justkannada.in): ‘ಕೋಲುಮಂಡೆ ಆಲ್ಬಂ ಸಾಂಗ್ ಸಾಕಷ್ಟು ವಿವಾದ ಉಂಟುಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾದ ಹಿನ್ನೆಲೆ   ರ್ಯಾಪರ್ ಚಂದನ್ ಶೆಟ್ಟಿ ಬಹಿರಂಗ ಕ್ಷಮೆಯಾಚಿಸಿದ್ದಾರೆ.

jk-logo-justkannada-logo

ಜಾನಪದ ಹಾಡನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ. ಸಂಕಮ್ಮ ಅವರನ್ನು ಕೆಟ್ಟದಾಗಿ ತೋರಿಸಲಾಗಿದೆ. ಮಲೈಮಹದೇಶ್ವರ ಸ್ವಾಮಿ ಇತಿಹಾಸ ತಿರುಚಿ ಹಾಡು ರಚಿಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರ್ಯಾಪರ್ ಚಂದನ ಶೆಟ್ಟಿ ಕ್ಷಮೆಯಾಚಿಸಿದ್ದಾರೆ. ಯಾರಿಗೂ ನೋವುಂಟು ಮಾಡುವ ಉದ್ಧೇಶವಿಲ್ಲ. ಇದರಿಂದ ನೋವಾಗಿದ್ದರೇ ಕ್ಷಮೆಯಾಚಿಸುತ್ತೇನೆ. ಚಿತ್ರತಂಡದ ಪರವಾಗಿ ಕ್ಷಮೆಯಾಚಿಸುವೆ ಎಂದು ಹೇಳಿದ್ದಾರೆ.

ಮರುಚಿತ್ರಣ: ವಿಡಿಯೋ ಗೆ ವಿರೋಧವ್ಯಕ್ತವಾದ ಹಿನ್ನೆಲೆಯಲ್ಲಿ  ಚಿತ್ರ ತಂಡವು ಹಾಡನ್ನು ಸಂಪೂರ್ಣ ಮರು ಚಿತ್ರಣ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

Key words  ; Maheshwara-song-portrayed-obscene-Rapper-Chandan-Shetty-apologizes-devotees-Mahadeshwara