ಮೀ ಟೂ ಪ್ರಕರಣ: ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ತನುಶ್ರೀ

Promotion

ಮುಂಬೈ:ಜೂ-15:(www.justkannada.in) ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಹಾಕಿದ್ದ ಲೈಂಗಿಕ ಕಿರುಕುಳದ ಪ್ರಕರಣಕ್ಕೆ ನಾನಾ ಪಾಟೇಕರ್ ಗೆ ಕ್ಲಿನ್ ಚಿಟ್ ನೀಡಿದ್ದ ಪೊಲೀಸರು ಕೇಸ್ ಕ್ಲೋಸ್ ಮಾಡಿದ್ದರು. ಇ ಹಿನ್ನಲೆಯಲ್ಲಿ ನಟಿ ತನುಶ್ರೀ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಕುರಿತು ಮಾತನಾಡಿದ ತನುಶ್ರೀ ದತ್ತಾ ಅವರ ವಕೀಲ ನಿತಿನ್ ಸತ್ಪುತೆ, ನಾನಾ ಪಾಟೇಕರ್ ಅವರನ್ನು ರಕ್ಷಿಸಲು ಪೊಲೀಸರು ಮುಂದಾಗಿದ್ದಾರೆ. ಅನೇಕ ಸಾಕ್ಷಿಗಳು ಇದ್ದರೂ ಸಹ ಅವರು ತಮ್ಮ ಹೇಳಿಕೆಯಲ್ಲಿ ಅದನ್ನು ದಾಖಲಿಸಲಿಲ್ಲ. ಪೊಲೀಸರು ಸರಿಯಾಗಿ ವಿಚಾರಣೆ ನಡೆಸಲಿಲ್ಲ. ಹಾಗಾಗಿ ನಾವು ಸಮರಿ ರಿಪೋರ್ಟ್ ತಿರಸ್ಕರಿಸಿದ್ದು, ಬಾಂಬೈ ಹೈ ಕೋರ್ಟ್‍ನಲ್ಲಿ ರಿಟ್ ಪೆಟಿಶನ್ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಈ ಪ್ರಕರಣವನ್ನು ಸಿಐಡಿ ಅಥವಾ ಬೇರೆ ಕ್ರೈಂ ಬ್ರ್ಯಾಂಚ್‍ಗೆ ವರ್ಗಾಯಿಸಲು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

ಸಮರಿ ರಿಪೋರ್ಟ್ ಬಗ್ಗೆ ನಮಗೆ ಓಸ್ವಿವರ್ ಪೊಲೀಸ್ ಠಾಣೆಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಪೊಲೀಸರು ಬಿ ಅಥವಾ ಸಿ ಸಮರಿ ದಾಖಲಿಸಿಕೊಂಡರೆ ಅದು ಅಂತಿಮವಾಗುವುದಿಲ್ಲ. ಇದನ್ನು ನಾವು ನ್ಯಾಯಲಯದಲ್ಲಿ ನಿರಾಕರಿಸಬಹುದು. ಕೋರ್ಟ್‍ನಲ್ಲಿ ವಿಚಾರಣೆ ನಡೆದ ಮೇಲೆ ನ್ಯಾಯಾಲಯ ನಿರ್ಧಾರ ಮಾಡಿದರೆ, ಪೊಲೀಸರು ಮತ್ತೆ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

ಮೀ ಟೂ ಪ್ರಕರಣ: ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ನಟಿ ತನುಶ್ರೀ

Bollywood,Nana patekar,MeToo case,Tanushree dutta,file petition,bombay high court